ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ವಂಚನೆ: ಬಸ್ರೂರು ರಾಜೀವ ಶೆಟ್ಟಿ ವಿರುದ್ಧ ದೂರು

ಉಡುಪಿ, ಸೆ.25: ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಮೋಸ ಮಾಡಿರುವ ಆರೋಪದಲ್ಲಿ ರೆಡ್‌ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆಯ ಚೆಯರ್‌ಮೆನ್ ಬಸ್ರೂರು ರಾಜೀವ ಶೆಟ್ಟಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕರ್ನಾಟಕದ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಬಸ್ರೂರು ರಾಜೀವ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿಯ ಹೆಸರಿನಲ್ಲಿ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ದೇಣಿಗೆ ಪಡೆದಿದ್ದಾರೆ. ಮೂಲ ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಮೋಸ ಮಾಡುವ ಉದ್ದೇಶದಿಂದ ಅದರ ಚಿಹ್ನೆ ಮತ್ತು ಟ್ರೇಡ್ ಮಾರ್ಕ್ ಉಪಯೋಗಿಸಿ ತಮ್ಮದೇ ಆದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಂಚಿಸಿದ್ದಾರೆಂದು ದೂರಲಾಗಿದೆ.

ನಕಲಿ ಟ್ರಸ್ಟನ್ನು ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2020ರ ಜ.6 ರಂದು ನೋಂದಾಯಿಸಿ, ಮೂಲ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮೋಸ ಮಾಡಿರುವುದಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಂಗಳೂರು ಇದರ ಚೇಯರ್‌ಮೆನ್ ಎಸ್.ನಾಗಣ್ಣ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!