ಚಂದ್ರನ ಕಕ್ಷೆ ಪ್ರವೇಶಿಸಿದ ‘ಚಂದ್ರಯಾನ-3’
ಹೊಸದಿಲ್ಲಿ: ಭಾರತದ ಚಂದ್ರಯಾನ-3 ನೌಕೆಯು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.
ಚಂದ್ರನ ಕಕ್ಷೆಯ ಪ್ರವೇಶವನ್ನು ರಾತ್ರಿ 7 ಗಂಟೆಗೆ ನಡೆಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಬಾಹ್ಯಾಕಾಶ ನೌಕೆಯನ್ನು ಸ್ಥಿರ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಗೋಳಿಸಲಾಗಿದೆ.
ಜುಲೈ 14ರಂದು ಮಧ್ಯಾಹ್ನ ಇಸ್ರೋದ ಉಡಾವಣಾ ವಾಹಕ ಮಾರ್ಕ್-3 ಮೂಲಕ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿತ್ತು. 40 ದಿನಗಳ ಪಯಣದ ಬಳಿಕ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆ ಇದೆ. ಇದು ಯಶಸ್ವಿಯಾದಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯುವ ನಾಲ್ಕನೇ ದೇಶವಾಗಿ ಭಾರತ ದಾಖಲೆಗೆ ಸೇರಲಿದೆ ಹಾಗೂ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಮೊಟ್ಟಮೊದಲ ದೇಶವಾಗಲಿದೆ.