ಬ್ರಹ್ಮಾವರ: ಸ್ನೇಹಿತನ ಚಿನ್ನದ ಸರ ಚೆನ್ನಾಗಿದೆ ಹೇಳಿ, ಕಸಿದು ಪರಾರಿಯಾದ ಯುವಕರು
ಬ್ರಹ್ಮಾವರ: (ಉಡುಪಿಟೈಮ್ಸ್ ವರದಿ) ಸ್ನೇಹಿತನ ಚಿನ್ನದ ಸರವನ್ನು ನೋಡಲು ತೆಗೆದುಕೊಂಡ ಇಬ್ಬರು ಅದನ್ನು ಹಿಂದಕ್ಕೆ ನೀಡದೆ, ಬೈಕ್ ನಲ್ಲಿ ಪರಾರಿಯಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಯಡ್ತಾಡಿ ಗ್ರಾಮದ ಅಲ್ತಾರಿನಲ್ಲಿ ನಡೆದಿದೆ.
ವಂಡಾರಿನ ಮಹೇಂದ್ರ (19) ತನ್ನ ಮನೆಯ ಬಳಿ ಸ್ನೇಹಿತ ಸುಧೀರನೊಂದಿಗೆ ಸಂಜೆ 4 ಗಂಟೆಗೆ ಮಾತನಾಡುತ್ತಿರುವ ಸಂದರ್ಭ ಪರಿಚಯ ವಿರುವ ಆರೋಪಿಗಳಾದ ಅನಿಲ ಹಾಗೂ ಸುರೇಶ್ ಬೈಕ್ನಲ್ಲಿ ಬಂದಿದ್ದರು. ನಂತರ ನಾಲ್ವರು ಮಾತನಾಡುತ್ತಿದ್ದಂತೆ ಮಹೇಂದ್ರರವರ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ನೋಡಿದ ಅನಿಲ್, ಇದು ತುಂಬಾ ಚೆನ್ನಾಗಿದೆ, ಒಮ್ಮೆ ನೋಡಿ ಕೊಡುತ್ತೇವೆ ಎಂದು ಹೇಳಿದ್ದು. ಆಗ ಮಹೇಂದ್ರ ರವರು ಅವರನ್ನು ನಂಬಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆದು ಅನಿಲ ಕೈಗೆ ನೀಡಿದ್ದು, ಆಗ ಆರೋಪಿಗಳಿಬ್ಬರೂ ಚೈನ್ನ್ನು ನೋಡುತ್ತಾ ಒಮ್ಮೇಲೆ ಅಲ್ಲಿಂದ ಓಡಿ ಹೋಗಿ, ಅವರು ಬಂದಿದ್ದ ಅವರ ಮೋಟಾರ್ ಸೈಕಲ್ನಲ್ಲಿ ವೇಗವಾಗಿ ಹೊರಟು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹೇಂದ್ರ ಮತ್ತು ಸ್ನೇಹಿತ ಸುಧೀಂದ್ರ ಸ್ವಲ್ಪ ದೂರ ಓಡಿ ಹೋಗಿ ಕರೆದು ಹುಡುಕಾಡಿದರೂ ಆರೋಪಿಗಳು ಪತ್ತೆಯಾಗಿರುವುದಿಲ್ಲ. ಆರೋಪಿಗಳಿಬ್ಬರೂ ಮಹೇಂದ್ರ ರವರನ್ನು ನಂಬಿಸಿ ಅವರಿಂದ ಸುಮಾರು ರೂಪಾಯಿ 50,000/- ಬೆಲೆ ಬಾಳುವ ಚಿನ್ನದ ಸರವನ್ನು ಪಡೆದು ವಾಪಾಸ್ಸು ಕೊಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.