ಉಡುಪಿ: ಸಾಂಕ್ರಾಮಿಕ ರೋಗದ ತಾಣವಾಗುವುದೇ ನರ್ಮ್ ಬಸ್ ನಿಲ್ದಾಣ?

ಉಡುಪಿ(ಉಡುಪಿ ಟೈಮ್ಸ್ ವರದಿ): ಎಲ್ಲಿ ನೋಡಿದರಲ್ಲಿ ಖಾಲಿಯಾಗಿ ಬಿದ್ದ ಮದ್ಯದ ಬಾಟಲಿಗಳು, ಇಹದ ಪರಿವೆ ಇಲ್ಲದೆ ಬಿದ್ದಿರುವ ಕುಡುಕರು, ಸಂಜೆ ಆಯಿತೆಂದರೆ ಸಾಕು ಜಗಳ, ಹೊಡೆದಾಟ, ಆ ದಾರಿಯಲ್ಲಿ ಸಂಜೆ ನಂತರ ಸಾಗುವುದೇ ದುಸ್ತರವಾಗಿದೆ. ಇದ್ಯಾವುದೋ ನಗರದ ಹೊರವಲಯದ ಕತೆಯಲ್ಲ ಬದಲಿಗೆ ಉಡುಪಿ ನಗರದ ಹೃದಯ ಭಾಗದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ನಗರ ಸಾರಿಗೆ ಬಸ್ಸು ನಿಲ್ದಾಣದ (ನರ್ಮ್ ಬಸ್ಸು ನಿಲ್ದಾಣ) ವ್ಯಥೆ .

ಸರಿಯಾದ ನಿರ್ವಹಣೆ ಇಲ್ಲದೆ ಕುಡುಕರ ತಾಣವಾಗಿರುವ ಈ ಬಸ್ ನಿಲ್ದಾಣವು , ಸ್ವಚ್ಛತೆ ಇಲ್ಲದೆ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ ,

ಇವಿಷ್ಟೇ ಸಾಲದು ಎಂಬಂತೆ ವಲಸೆ ಕಾರ್ಮಿಕರು ಗುಟ್ಕ ತಿಂದು ಅಲ್ಲಲ್ಲಿ ಉಗಿದು ಹೊಸದಾಗಿ ನಿರ್ಮಿಸಲಾದ ಬಸ್ಸು ನಿಲ್ದಾಣದ ಅಂದವನ್ನು ಕೆಡಿಸಿದ್ದಾರೆ. ಕಸ ತ್ಯಾಜ್ಯಗಳ ರಾಶಿಯೇ ಬಿದ್ದುಕೊಂಡಿದೆ. ಇಲ್ಲಿ ಕಸ ತ್ಯಾಜ್ಯಗಳ ವಿಲೇವಾರಿಯು ಸರಿಯಾಗಿ ನಡೆಯುತ್ತಿಲ್ಲ. ಮಾರಕ ಸೊಳ್ಳೆಗಳ ಉತ್ಪತ್ತಿಗೂ ಇಲ್ಲಿಯ ಪರಿಸರವು ಕಾರಣವಾಗಿದ್ದು, ಡೆಂಗ್ಯೂ ಮಲೇರಿಯಾ ಮುಂತಾದ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.

ರೋಗ ಪಿಡಿತರು ಇಲ್ಲಿ ಆಶ್ರಯಿಸಿಕೊಂಡಿದ್ದಾರೆ. ಕೆಮ್ಮಿ ಉಗಳುವುದು ಕಂಡು ಬಂದಿದೆ. ಪರಿಸರದಲ್ಲಿ ಕೊರೊನಾ ಸೋಂಕು ಹರಡುವ ಅವಕಾಶವು ಇಲ್ಲಿದೆ. ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಗುಂಪು ಸೇರುತ್ತಾರೆ. ಅವರೆಲ್ಲರು ಮಾಸ್ಕ್ ಧರಿಸುವುದಾಗಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೊರೊನಾದಿಂದ ರಕ್ಷಿಸಿಕೊಳ್ಳುವ ನಿಯಮಾವಳಿಗಳು ಇಲ್ಲಿ ಪಾಲನೆಯಾಗುತ್ತಿಲ್ಲ.

ನಿಲ್ದಾಣದ ವಠಾರವು ಬಯಲು ಶೌಚಾಲಯವಾಗಿದೆ. ಎಂದು ನಾಗರಿಕ ಸಮತಿಯ ಪದಾಧಿಕಾರಿಗಳು ದೂರಿದ್ದಾರೆ. ಆದಷ್ಟು ಬೇಗ ನಗರಸಭೆ ನಿಲ್ದಾಣದ ಪರಿಸರದ ಶುಚಿತ್ವಗೊಳಿಸಬೇಕು. ಕಾವಲುಗಾರ ನೇಮಿಸಬೇಕೆಂದು ಸಂಬಂಧಪಟ್ಟವರು ತಕ್ಷಣ ಸುವ್ಯವಸ್ಥೆ ಕಾಪಾಡಬೇಕೆಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!