ಈ ವರ್ಷ ಪೌರತ್ವ ಬಿಟ್ಟುಕೊಟ್ಟ ಭಾರತೀಯರ ಸಂಖ್ಯೆ ಜೂನ್ ವರೆಗೆ 87 ಸಾವಿರ!
ನವದೆಹಲಿ: ಈ ವರ್ಷದ ಜೂನ್ ವರೆಗೂ 87,026 ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್ ಲೋಕಸಭೆಗೆ ತಿಳಿಸಿದ್ದಾರೆ.
2011 ರಿಂದ ಈ ವರೆಗೂ ಒಟ್ಟು 17.50 ಲಕ್ಷ ಮಂದಿ ಪೌರತ್ವ ಬಿಟ್ಟುಕೊಟ್ಟಿದ್ದಾರೆ ಎಂದು ಸಚಿವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
2022 ರಲ್ಲಿ 2,25,620 ಭಾರತೀಯರು,
2021 ರಲ್ಲಿ 1,63,370,
2020 ರಲ್ಲಿ 85,256 ಮಂದಿ
2019 ರಲ್ಲಿ 1,44,017 ಮಂದಿ
2018 ರಲ್ಲಿ 1,34,561
2017ರಲ್ಲಿ 1,33,049 , 1,41,603 ಮಂದಿ
2016 ರಲ್ಲಿ, 1,31,489 ಮಂದಿ
2015 ರಲ್ಲಿ, 2014 ರಲ್ಲಿ 1,29,328 ಮಂದಿ
2013 ರಲ್ಲಿ 1,31,405 ಮಂದಿ
2012 ರಲ್ಲಿ 1,20,923
2011 ರಲ್ಲಿ 1,22,819 ಮಂದಿ ಪೌರತ್ವ ತ್ಯಜಿಸಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಜಾಗತಿಕ ಕೆಲಸದ ಸ್ಥಳವನ್ನು ಅನ್ವೇಷಿಸುವ ಭಾರತೀಯ ಪ್ರಜೆಗಳ ಸಂಖ್ಯೆ ಗಣನೀಯವಾಗಿದೆ. ಅವರಲ್ಲಿ ಅನೇಕರು ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ತೆಗೆದು ಕೊಳ್ಳುವುದನ್ನು ಆಯ್ಕೆ ಮಾಡಿದ್ದಾರೆ” ಎಂದು ಸಚಿವರು ಹೇಳಿದರು.
ವಿದೇಶಗಳಲ್ಲಿ ಭಾರತೀಯ ಸಮುದಾಯವನ್ನು ಗುರುತಿಸುತ್ತಿರುವುದು ದೇಶಕ್ಕೆ ಹೆಮ್ಮೆಯ ವಿಷಯ, ಅನಿವಾಸಿ ಭಾರತೀಯರೊಂದಿಗೆ ಸಂಪರ್ಕದಲ್ಲಿ ರುವುದರ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. “ಯಶಸ್ವಿ, ಸಮೃದ್ಧ ಮತ್ತು ಪ್ರಭಾವಶಾಲಿ ಅನಿವಾಸಿ ಭಾರತೀಯರ ಸಮುದಾಯ ಭಾರತಕ್ಕೆ ಪ್ರಯೋಜನವಾಗಿದೆ ಮತ್ತು ಇಂತಹ ಸಮುದಾಯಗಳ ಖ್ಯಾತಿಯನ್ನು ರಾಷ್ಟ್ರೀಯ ಲಾಭಕ್ಕಾಗಿ ಬಳಸಿಕೊಳ್ಳು ವುದು ನಮ್ಮ ವಿಧಾನವಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.