ತೀರ್ಥಹಳ್ಳಿ: ಕುಸಿದ ಸೇತುವೆ, ಶಿವಮೊಗ್ಗ- ಉಡುಪಿ ಸಂಚಾರ ಸಂಪುರ್ಣ ಸ್ಥಗಿತ ?
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಸುರಿದ ವಿಪರೀತ ಮಳೆಗೆ ತೀರ್ಥಹಳ್ಳಿ ಸಮೀಪದ ರಂಜದಕಟ್ಟೆಯಲ್ಲಿ ಸೇತುವೆಯೊಂದು ಕುಸಿದಿದ್ದು, ಇದರಿಂದ ಶಿವಮೊಗ್ಗ – ಉಡುಪಿ ನಡುವಿನ ಸಂಚಾರ ಸಂಪುರ್ಣ ಸ್ಥಗಿತಗೊಂಡಿದೆ.
ರಂಜದಕಟ್ಟೆಯ ಹಳ್ಳಕ್ಕೆನಿರ್ಮಿಸಿರುವ ಸಣ್ಣ ಸೇತುವೆ ಕುಸಿತವಾಗಿದೆ. ಭಾರಿ ಮಳೆ ಹಾಗೂ ಭಾರಿ ವಾಹನಗಳ ಸಂಚಾರದಿಂದ ಸೇತುವೆ ಕುಸಿದಿದೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ನಾಗರಾಜ್ ನಾಯ್ಕ್ ಮಾತನಾಡಿ, ಸುಮಾರು 100 ವರ್ಷದ ಹಳೆಯ ಸೇತುವೆ ಇದಾಗಿದ್ದು ಆರ್ಚ್ ಶೇಪ್ ನಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣ ಇಟ್ಟಿಗೆಯಲ್ಲಿ ನಿರ್ಮಿಸಲಾಗಿರುವ ಪರಿಣಾಮ ಒಂದಕಡೆ ಕುಸಿತ ಕಾಣಿಸಿಕೊಂಡಿದೆ. ಪಕ್ಕದಲ್ಲಿ ಹೊಸ ಸೇತುವ ನಿರ್ಮಿಸಲಾಗುತ್ತಿದೆ. ಇದು ಅರ್ಧಂಬರ್ಧ ನಿರ್ಮಾಣವಾಗಿರುವ ಪರಿಣಾಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇನ್ನೆರಡು ದಿನಗಳ ಒಳಗೆ ಈ ಹಳೇ ಸೇತುವೆಯಲ್ಲಿ ಓಡಾಡಲು ಯೋಗ್ಯವಾಗುವ ರೀತಿಯಲ್ಲಿ ಪುನರ್ನಿಮಿಸಲಾಗುವುದಾಗಿ ಭರವಸೆ ನೀಡಿದ್ದಾರೆ.
ಈ ಸೇತುವೆ ಮೂಲಕ ಹಲವು ಪ್ರದೇಶಗಳ ಜನರ ಓಡಾಟ ನಡೆಯುತ್ತಿತ್ತು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಇದೇ ಮಾರ್ಗವಾಗಿ ಪ್ರತಿದಿನ ನೂರಾರು ರೋಗಿಗಳು ಉಡುಪಿ, ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಆದರೆ ಇದೀಗ ಸೇತುವೆ ಕುಸಿತದಿಂದ ಆ್ಯಂಬುಲೆನ್ಸ್ ಸೇರಿದಂತೆ ಹಲವಾರು ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
Where is thr Bridge photo. It should be exact news sir