ನೋಕಿಯಾ: ಕೈಗೆಟುಕುವ ದರದಲ್ಲಿ 2 ಸ್ಮಾರ್ಟ್ ಫೋನ್ ಬಿಡುಗಡೆ
ಹೆಚ್ಎಂಡಿ ಗ್ಲೋಬಲ್ ಒಡೆತನದ ಸ್ಮಾರ್ಟ್ ಫೋನ್ ಸಂಸ್ಥೆ ನೋಕಿಯಾ ಕೈಗೆಟುಕುವ ದರದಲ್ಲಿ 2 ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ 2.4 ಹಾಗೂ ನೋಕಿಯಾ 3.4 ಹೊಸದಾಗಿ ಬಿಡುಗಡೆಯಾಗಿರುವ 2 ಸ್ಮಾರ್ಟ್ ಫೋನ್ ಗಳಾಗಿವೆ.
ನೋಕಿಯಾ 3.4 ತ್ರಿವಳಿ ಹಿಂಬದಿಯ ಕ್ಯಾಮರಾ ಆಗಿದ್ದರೆ, ನೋಕಿಯಾ 2.4 ವಾಟರ್ ಡ್ರಾಪ್ ಸ್ಟೈಲ್ ಡಿಸ್ಪ್ಲೇಯನ್ನು ಹೊಂದಿದ್ದು ಅವಳಿ ರಿಯರ್ ಕ್ಯಾಮರಾಗಳನ್ನು ಹೊಂದಿದೆ.
ಬದಲಾಗುವ ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವು ಬದಲಾಯಿಸಿಕೊಂಡಿದ್ದೇವೆ, ಮೌಲ್ಯವರ್ಧಿತ ಸೇವೆಗಳನ್ನು ಹೆಚ್ಎಂಡಿ ಕನೆಕ್ಟ್ ಪ್ರೋ ಮೂಲಕ ಮತ್ತಷ್ಟು ಸುಧಾರಿಸಲು ಸಾಧ್ಯವಾಗಿದೆ ಎಂದು ಹೆಚ್ಎಂಡಿ ಗ್ಲೋಬಲ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ 3/32ಜಿಬಿ, 3/64 ಜಿಬಿ, 4/64 ಜಿಬಿ ಮೆಮೊರಿ ಹಾಗೂ ಸ್ಟೋರೇಜ್ ಕಾನ್ಫಿಗರೇಷನ್ ಗಳಲ್ಲಿ ಲಭ್ಯವಿದ್ದು ಜಾಗತಿಕ ರೀಟೇಲ್ ದರವನ್ನು 159 ಯುರೋಗಳಿಗೆ ( ಭಾರತೀಯ ರೂಪಾಯಿಗಳಲ್ಲಿ 13,677) ಈ ಫೋನ್ ಲಭ್ಯವಿದೆ.
ನೋಕಿಯಾ 2.4 ಮೊಬೈಲ್ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ ಬರಲಿದ್ದು 2/32, 3/64 ಜಿಬಿ ಮೆಮೋರಿ ಹಾಗೂ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು 119 ಯುರೋಗಳಿಗೆ ಅಂದರೆ ಭಾರತೀಯ ರೂಪಾಯಿಗಳಲ್ಲಿ 10,237 ರೂಗಳಿಗೆ ಲಭ್ಯವಾಗಲಿದೆ.
ನೋಕೊಯಾ 3.4 ಮೊಬೈಲ್ 6.39 ಇಂಚಿನ ಹೆಚ್ ಡಿ + ಡಿಸ್ಪ್ಲೇ ಹೊಂದಿದ್ದು 19:5:9 ಆಸ್ಪೆಕ್ಟ್ ರೇಶಿಯೋ ಹಾಗೂ 400 ನಿಟ್ಸ್ ನ ಪೀಕ್ ಬ್ರೈಟ್ನೆಸ್ ಹೊಂದಿದೆ.
ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 460 ಎಸ್ಒಸಿ 3 ಜಿಬಿ ಹಾಗೂ 4 ಜಿಬಿ ರ್ಯಾಮ್ ಆಯ್ಕೆಗಳಿವೆ. ನೋಕಿಯಾ 3.4, 32 ಜಿಬಿ ಹಾಗೂ 64 ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದ್ದು ಎರಡರಲ್ಲಿಯೂ 512 ಜಿಬಿಗಳವರೆಗೆ ವಿಸ್ತರಿಸಬಹುದಾದ ಸಾಮರ್ಥ್ಯ ಹೊಂದಿದೆ.
13 ಎಂ.ಪಿ ಕ್ಯಾಮರಾ ಹಾಗೂ 5 ಎಂಪಿ ಅಲ್ಟ್ರಾ ವೈಡ್ ಆಂಗಲ್ ಶೂಟರ್ ಹಾಗೂ 2 ಎಂ.ಪಿ ಡೆಪ್ತ್ ಸೆನ್ಸಾರ್ ನ್ನು ಹೊಂದಿದೆ. 8 ಎಂಪಿ ಸೆಲ್ಫಿ ಕ್ಯಾಮರಾ ಹಾಗೂ ಕ್ಯಾಮರಾ ಸೆನ್ಸಾರ್ ನ್ನು ಹೊಂದಿದ್ದು 4000 ಎಂಎಎಚ್ ಬ್ಯಾಟರಿ 10 ವಾಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ.
ನೋಕಿಯಾ 2.4 ನಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22ಎಸ್ಒಸಿ, 2 ಜಿಬಿ ಹಾಗೂ 3 ಜಿಬಿ ರ್ಯಾಮ್ ಆಯ್ಕೆಯೊಂದಿಗೆ ಲಭ್ಯವಿರಲಿದೆ. 13 ಎಂ.ಪಿ ಪ್ರೈಮರಿ ಸೆನ್ಸಾರ್ ಜೊತೆಗೆ ಎಫ್/2.2 ಲೆನ್ಸ್ 2 ಎಂ.ಪಿ ಡೆಪ್ತ್ ಸೆನ್ಸಾರ್ ಹಗೂ 5 ಎಂ.ಪಿ ಸೆಲ್ಫಿ ಕ್ಯಾಮರಾ ಹೊಂದಿದ್ದು, 4,500 ಎಂಎಎಚ್ ಬ್ಯಾಟರಿ ಹೊಂದಿದೆ.