ಒಂದು ತಿಂಗಳ ಸಾಧನೆಯ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯರ ‘ATM ಸರ್ಕಾರ- ಬಿಜೆಪಿ ಟೀಕೆ
ಬೆಂಗಳೂರು, ಜು.4: ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿರುವ ನಡುವೆಯೇ ಸಿದ್ದರಾಮಯ್ಯರ ‘ATM ಸರ್ಕಾರ’ ಎಂದು ಟೀಕಿಸಿರುವ ಬಿಜೆಪಿ, 10 ‘ಘನಾಂಧಾರಿ ಸಾಧನೆಗಳ ಪಟ್ಟಿ’ ಬಿಡುಗಡೆ ಮಾಡುವ ಮೂಲಕ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, “ರಾಜ್ಯದಲ್ಲಿ ಸಿದ್ದರಾಮಯ್ಯರ ‘ATMSarkara’ ಒಂದು ತಿಂಗಳ ಅವಧಿಯಲ್ಲೇ ಮಾಡಿದ ಘನಾಂಧಾರಿ ಸಾಧನೆಗಳ ಪಟ್ಟಿ” ಎಂದು ಹತ್ತು ಅಂಶಗಳನ್ನು ಉಲ್ಲೇಖಿಸಿ ಟೀಕಿಸಿದೆ.
ಕಾಂಗ್ರೆಸ್ ಸಾಧನೆಯ ಪಟ್ಟಿ ಹೀಗಿದೆ…
1. ಸರ್ಕಾರಿ ಇಲಾಖೆಯ ಅಧಿಕಾರಿಗಳ ಜತೆ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕಮಿಷನ್ ಸಭೆ..!
2. ಚುನಾವಣಾ ಪೂರ್ವ ಘೋಷಿಸಿದ ಗ್ಯಾರಂಟಿಗಳ ಮುಂದೂಡಿಕೆ ಜತೆಗೆ ನೀಡದ ಗ್ಯಾರಂಟಿಗೆ ಕಂಡೀಷನ್ ಅಪ್ಲೈ..!
3. ವಿದ್ಯುತ್, ಕುಡಿಯುವ ನೀರು, ತಿನ್ನುವ ಅಕ್ಕಿ ಸೇರಿ ಎಲ್ಲಾ ಬೆಲೆಯೂ ಏರಿಕೆ..!
4. ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್..!
5. ಪಠ್ಯಪುಸ್ತಕದಲ್ಲಿ ಎಡಬಿಡಂಗಿ ಸಿದ್ಧಾಂತದ ಹೇರಿಕೆ, ಕ್ರಾಂತಿಕಾರಿಗಳು, ರಾಜರ ಪಾಠಗಳಿಗೆ ಕೂಕ್..!
6. ಅಕ್ರಮ ಮರಳು ಮಾಫಿಯಾಗೆ ಚಾಲನೆ ಕೊಟ್ಟು ಕರ್ತವ್ಯನಿರತ ಪೊಲೀಸ್ ಪೇದೆಯ ಕೊಲೆ..!
7. ಬರಗಾಲದ ಕರಿಛಾಯಿ ಆವರಿಸಿದರೂ ಕ್ರಮ ಕೈಗೊಳ್ಳದೆ ಅನ್ನದಾತನ ಮೊದಲ ಬಲಿ ಪಡೆದ ಹೆಗ್ಗಳಿಕೆ..!
8. ಶುದ್ಧ ಕುಡಿಯುವ ನೀರು ಪೂರೈಸಲಾಗದೆ ಅಮಾಯಕ ಜೀವಗಳ ಬಲಿ ಪಡೆದ ಕುಖ್ಯಾತಿ..!
9. ಅಬಕಾರಿ ಇಲಾಖೆಯ ಉನ್ನತ ಹುದ್ದೆಗಳು ಕೋಟಿ ಕೋಟಿಗೆ ಸೇಲ್, ವರ್ಗಾವಣೆ ದಂಧೆಗೆ ಇಳಿದ ಶ್ಯಾಡೋ ಸಿಎಂ ಯತೀಂದ್ರ..!
10. ಕುರ್ಚಿ ಬಿಡಲು ತಯಾರಲ್ಲಿದ ಸಿದ್ದರಾಮಯ್ಯ, ಪಟ್ಟು ಬಿಡದ ಡಿ.ಕೆ.ಶಿವಕುಮಾರ್ ಕಾದಾಟದಲ್ಲೇ ಕಾಲ ಹರಣ..!
“ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬರ ಬಂದಿದೆ. ಶಾಂತಿ, ನೆಮ್ಮದಿಯ ಬೆಳೆ ಇಲ್ಲ, ಜನರಿಗೆ ಬೆಲೆ ಏರಿಕೆಯ ಬರೆ ಎಳೆದು, ಮೇಲೆ ಕಲರ್ ಕಲರ್ ಇಡುವುದು ಉಚಿತ ಖಚಿತ ನಿಶ್ಚಿತ” ಬಿಜೆಪಿ ವ್ಯಂಗ್ಯವಾಡಿದೆ.”