ಉಡುಪಿ: ಹೂ ನಷ್ಟ ಪರಿಹಾರಕ್ಕೆ ಮಧ್ಯವತಿಗಳನ್ನು ಸಂಪರ್ಕಿಸಬೇಡಿ
ಉಡುಪಿ: ಲಾಕ್‌ಡೌನ್‌ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್ ರೂ.25,000.00 ಪರಿಹಾರವನ್ನು ಗರಿಷ್ಟ 1.00ಹೆಕ್ಟೇರ್ ವಿಸ್ತೀರ್ಣಕ್ಕೆ ಪಾವತಿಸಲಾಗುವುದು. ಈ ಬಗ್ಗೆ ಈಗಾಗಲೇ ಪ್ರಕಟಣೆ ನೀಡಿರುವಂತೆ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂದಾಗದೆ ಇರುವ ರೈತರಿಂದ ಅರ್ಜಿಗಳನ್ನು ತಾಲೂಕು ತೋಟಗಾರಿಕೆ ಇಲಾಖೆ ಕಛೇರಿಗಳಲ್ಲಿ ಸ್ವೀಕರಿಸಲಾಗುತ್ತಿದೆ.
ಸದರಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ರೈತರಿಂದ ಬೇರೆ ಜಿಲ್ಲೆಯಲ್ಲಿ ಹಣ ವಸೂಲಿಯನ್ನು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಮಾಡುತ್ತಿರುವ ವರದಿಯಾಗಿದ್ದು, ಜಿಲ್ಲೆಯ ರೈತರು ಯಾವುದೇ ಪರಿಹಾರ , ಪಾವತಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ ಹಾಗೂ ಸದರಿ ಬೆಳೆ ಇರುವ ಅರ್ಜಿದಾರರ ತಾಲೂಕುಗಳಿಗೆ ಹೋಬಳಿ ಮಟ್ಟದ ಸಮಿತಿಯು ಭೇಟಿ ನೀಡಿ ಬೆಳೆ ಇರುವ ಬಗ್ಗೆ ಖಚಿತಪಡಿಸಿಕೊಂಡು ಪರಿಹಾರ ಪಾವತಿಸಲು ಕ್ರಮವಹಿಸಲಾಗುವುದು. ಈ ಬಗ್ಗೆ ರೈತ-ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗಬಾರದಾಗಿ ತೋಟಗಾರಿಕಾ ಇಲಾಖೆ
ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ), ಉಡುಪಿ ಜಿಲ್ಲೆ: 0820-2531950 , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ), ಉಡುಪಿ ತಾಲೂಕು:0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ), ಕುಂದಾಪುರ ತಾಲೂಕು: 08254-230813 ಇವರನ್ನು ಸಂಪರ್ಕಿಸುವ0ತೆ ಉಡುಪಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಭುನವೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.