ಪ್ರಥಮ ವರ್ಷದ ಯುಜಿ ಮತ್ತು ಪಿಜಿ ತರಗತಿಗಳಿಗೆ ಯುಜಿಸಿ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಸಾಂಕ್ರಾಮಿಕ ರೋಗದ ದೃಷ್ಟಿಯಿಂದ 2020-21ರ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇಳಾಪಟ್ಟಿಮಾರ್ಗಸೂಚಿಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸೋಮವಾರ ಅನುಮೋದಿಸಿದೆ. ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಅಧಿಕಾರಿಗಳು ಪ್ರಥಮ ವರ್ಷದ ಪಿಜಿ ಮತ್ತು ಯುಜಿ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಪರೀಕ್ಷೆಗಳಿಗಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಮಾರ್ಗಸೂಚಿಗಳ ಪ್ರಕಾರ, 2020-21ರ ಶೈಕ್ಷಣಿಕ ವರ್ಷವು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ 1 ರಿಂದ ಪ್ರಾರಂಭವಾಗಬಹುದು. ಆದಾಗ್ಯೂ, ಅರ್ಹತಾ ಪರೀಕ್ಷೆಯಲ್ಲಿ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗಿದ್ದರೆ, ವಿಶ್ವವಿದ್ಯಾನಿಲಯಗಳು ನವೆಂಬರ್ 18 ರೊಳಗೆ ಶೈಕ್ಷಣಿಕ ವರ್ಷ ಘೋಷಣೆ ಮಾಡಬಹುದು ಎಂದು ಆಯೋಗ ಹೇಳಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ನಡೆಸಲು ಕಠಿಣ ಮತ್ತು ಸ್ಪೀಡ್ ನ ನಿಯಮಗಳಿಲ್ಲ ಎಂದು ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟವರ್ಧನ್ ಹೇಳಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಮೆರಿಟ್ ಅಥವಾ ಬೇರೆ ವಿಧಾನದ ಪ್ರವೇಶವು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಮತ್ತು ಉಳಿದ ಖಾಲಿ ಸೀಟುಗಳು ನವೆಂಬರ್ 30 ರೊಳಗೆ ಭರ್ತಿ ಆಗಬೇಕು ಎಂದು ಯುಜಿಸಿ ಸೂಚಿಸಿದೆ. “ಪ್ರವೇಶ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಸಂಸ್ಥೆಗಳು ತಮ್ಮ ಶೈಕ್ಷಣಿಕ ವರ್ಷವನ್ನು ಮೊದಲೇ ಪ್ರಾರಂಭಿಸಬಹುದು ಮತ್ತು ನವೆಂಬರ್ 18 ರವರೆಗೆ ಕಾಯಬೇಕಾಗಿಲ್ಲ. ಮಹಾರಾಷ್ಟ್ರದ ಪರಿಸ್ಥಿತಿಯನ್ನು ಪರಿಗಣಿಸಿ ಈ ಮಾರ್ಗಸೂಚಿ ನೀಡಲಾಗಿದೆ, ಅಲ್ಲಿ ಪರೀಕ್ಷೆಗಳು ಅಕ್ಟೋಬರ್ ವೇಳೆಗೆ ಕೊನೆಗೊಳ್ಳುತ್ತವೆ” ಎಂದು ಪಟವರ್ಧನ್ ಹೇಳೀದ್ದಾರೆ.
ನವೆಂಬರ್ 30 ರವರೆಗೆ ವಿದ್ಯಾರ್ಥಿಗಳ ಪ್ರವೇಶ / ವಲಸೆ ರದ್ದತಿಯ ಕಾರಣಕ್ಕೆ ಗಿ ಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಆಯೋಗ ಹೇಳಿದೆ. ಇದರರ್ಥ ಎಲ್ಲಾ ಶುಲ್ಕಗಳು ಸೇರಿದಂತೆ ಸಂಪೂರ್ಣ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ (ಶೂನ್ಯ ರದ್ದತಿ ಶುಲ್ಕ). ಅದರ ನಂತರ, ಡಿಸೆಂಬರ್ 31 ರವರೆಗೆ ಪ್ರವೇಶ ರದ್ದತಿ ಅಥವಾ ಹಿಂಪಡೆಯುವಿಕೆಯ ಮೇಲೆ, 1,000 ರೂ.ಗಿಂತ ಹೆಚ್ಚಿಲ್ಲದ ಕಡಿತವನ್ನು ಪ್ರೆಸೆಸಿಂಗ್ ಶುಲ್ಕವಾಗಿ ಮಾಡಬಹುದು. ವಿದ್ಯಾರ್ಥಿಗಳಿಗೆ ಪದವಿಗಳನ್ನು ಸಕಾಲಿಕವಾಗಿ ನೀಡುವುದಕ್ಕಾಗಿ ತಮ್ಮ ರಜಾದಿನಗಳನ್ನು ಮೊಟಕುಗೊಳಿಸಲು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಗಣಿತ ವಿಷಯದೊಂದಿಗೆ ಪ್ರಾರಂಭವಾಗಲಿದೆ.
ಎಸ್‌ಎಸ್‌ಎಲ್‌ಸಿ ಮಂಡಳಿ ಸೋಮವಾರ ರಾಜ್ಯದಾದ್ಯಂತ 2.1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಪ್ರಾರಂಭಿಸಿದೆ, ಗಣಿತ ಪತ್ರಿಕೆಯೊಂದಿಗೆ ಪರೀಕ್ಷೆ ಪ್ರಾರಂಭವಾಗಿದೆ. ಕೋವಿಡ್ -19 ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೊಠಡಿ ಹಂಚಿಕೆ ಮಾಡಲಾಗುತ್ತಿದೆ. ಆದರೆ, ಸೋಮವಾರ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಯ ಅಂಕಿಅಂಶಗಳನ್ನು ಮಂಡಳಿ ನೀಡಿಲ್ಲ.