ಕಿಸಾನ್ ಸಮ್ಮಾನ್ ನಿಧಿ ಇ-ಕೆವೈಸಿಗೆ ಜೂ.30 ಕೊನೆಯ ದಿನ
ಉಡುಪಿ, ಜೂ.19: ಕೃಷಿ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯ ಗಳಿಸಲು ಎಲ್ಲಾ ವರ್ಗದ ರೈತರಿಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ 6000 ರೂ. ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರಿಂದ 4000 ರೂ. ಗಳನ್ನು ಎರಡು ಕಂತುಗಳಲ್ಲಿ ಒಟ್ಟು 10000 ರೂ. ಗಳನ್ನು ಪಡೆಯಲು, ಸಾಗುವಳಿ ಭೂಮಿಯನ್ನು 2019 ರ ಫೆಬ್ರವರಿ 1 ರ ಒಳಗೆ ಹೊಂದಿರುವ ಸ್ವಾಧೀನದಲ್ಲಿರುವ ಹಾಗೂ ಭೂದಾಖಲೆಗಳಲ್ಲಿ ಹೆಸರಿರುವ ರೈತರು ಅರ್ಹರಾಗಿರುತ್ತಾರೆ.
ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಮಾಜಿ ಮತ್ತು ಹಾಲಿ ಸಚಿವರು, ರಾಜ್ಯ ಸಚಿವರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವಾಲಯ ಕಚೇರಿ, ಇಲಾಖೆ, ಕ್ಷೇತ್ರ ಕಚೇರಿಗಳಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಅಂಗಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು, ಹಾಲಿ ಅಥವಾ ನಿವೃತ್ತ ಕೇಂದ್ರ, ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸರ್ಕಾರಿ ಅಧೀನದ ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಆಡಳಿತ ಸಂಸ್ಥೆಗಳ ಖಾಯಂ ಅಧಿಕಾರಿಗಳು (ಡಿ ಗ್ರೂಪ್/ ದರ್ಜೆ 4 ನೌಕರರು ಹೊರತುಪಡಿಸಿ), 10000 ರೂ. ಮೇಲ್ಪಟ್ಟ ಪಿಂಚಣಿದಾರರು, ಹಿಂದಿನ ಸಾಲಿನಿಂದ ಈವರೆಗಿನ ಆದಾಯ ತೆರಿಗೆ ಪಾವತಿದಾರರು, ವೈದ್ಯರು, ಅಭಿಯಂತರರು, ವಕೀಲರು, ಲೆಕ್ಕ ಪರಿಶೋಧಕರು, ವಸ್ತು ಶಿಲ್ಪದಂತಹ ವೃತ್ತಿಪರರು ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡು ಸದರಿ ವೃತ್ತಿಯನ್ನು ಕೈಗೊಳ್ಳುತ್ತಿರುವವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೂ ನೋಂದಾಯಿಸದೇ ಇರುವ ಜಿಲ್ಲೆಯ ಅರ್ಹ ರೈತರು ಸ್ವಯಂ ಘೋಷಣಾ ಪತ್ರ, ಎಲ್ಲ ಸರ್ವೇ ನಂಬರ್‌ಗಳ ಪಹಣಿ, ಆಧಾರ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಿ, ನೋಂದಾಯಿಸಿಕೊಳ್ಳ ಬಹುದಾಗಿದೆ. ಆಧಾರ್ ಕಾರ್ಡ್ನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಸುವುದು ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಜಿಲ್ಲೆಯ ಒಟ್ಟು ಆಧಾರ್ ದೃಢೀಕೃತ 1,53,801, ಮಂದಿ ರೈತರ ಪೈಕಿ 1,19,835 (ಶೇ.78) ರೈತರು ಕೆ.ವೈ.ಸಿ ಮಾಡಿಸಿದ್ದು, ಉಳಿದ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ರೈತರು hಣಣಠಿs://ಠಿmಞisಚಿಟಿ.gov.iಟಿ ಪೋರ್ಟಲ್‌ನಲ್ಲಿ ಫಾರ್ಮರ್ಸ್ನ ಇ-ಕೆವೈಸಿ ಅವಕಾಶದಡಿ ಈಗಾಗಲೇ ಪಿ.ಎಂ.ಕಿಸಾನ್ ಯೋಜನೆಯಡಿ ಫಲಾನುಭವಿಯಾಗಿರುವ ರೈತರ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದಾಗ ಮೊಬೈಲ್‌ಗೆ ಓ.ಟಿ.ಪಿ ರವಾನೆಯಾಗುತ್ತದೆ. ಓ.ಟಿ.ಪಿ ಯನ್ನು ದಾಖಲಿಸಿದಾಗ ತಂತ್ರಾಂಶ ಆಧಾರಿತ ಪರಿಶೀಲನೆ ನಂತರ e-ಏಙಅ is Suಛಿಛಿessಜಿuಟಟಥಿ Submiಣಣeಜ ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಓ.ಟಿ.ಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವೈಸಿ ಮಾಡಿಸಬಹುದಾಗಿದ್ದು, ಈಗಾಗಲೇ ಇ-ಕೆವೈಸಿ ಆಗಿದ್ದರೆ, e-ಏಙಅ ಂI-ಒಚಿಜಥಿ ಆoಟಿe ಎಂಬುದಾಗಿ ತಿಳಿಸುತ್ತದೆ.
ಫಲಾನುಭವಿಯ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಯೊAದಿಗೆ ಜೋಡಣೆಯಾಗದಿದ್ದಲ್ಲಿ ಅಥವಾ ಮೊಬೈಲ್ ಸಂಖ್ಯೆಗೆ ಇ-ಕೆವೈಸಿ ಗಾಗಿ ಕಳುಹಿಸಿದ ಓ.ಟಿ.ಪಿ ಸ್ವೀಕೃತವಾಗದಿದ್ದಲ್ಲಿ ಅಂತವರು ನಾಗರೀಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸಬಹುದು.
ಗೂಗಲ್ ಪ್ಲೇ ಸ್ಟೋರ್‌ನಲ್ಲಿಯೂ ಸಹ PಒಏISಂಓ ಉಔI ಚಿಠಿಠಿ & ಂಚಿಜhಚಿಡಿ ಈಚಿಛಿe ಖಜ ಂಠಿಠಿ ಡೌನ್‌ಲೋಡ್ ಮಾಡಿಕೊಂಡು, ಲಾಗಿನ್ ಆಗಿ ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ, ಆಧಾರ್ ಸಂಖ್ಯೆಯೊಂದಿಗೆ ನೋಂದಾಣಿಯಾಗಿರುವ ಮೊಬೈಲ್‌ಗೆ ಓ.ಟಿ.ಪಿ ರವಾನೆಯಾಗುತ್ತದೆ. ಓ.ಟಿ.ಪಿ ಯನ್ನು ದಾಖಲಿಸಿದ ನಂತರ ಅಟiಛಿಞ heಡಿe ಣo ಛಿomಠಿಟeಣe e-ಏಙಅ ಎಂಬ ಮಾಹಿತಿ ಗೋಚರಿಸುತ್ತದೆ. ಮತ್ತೆ ಓ.ಟಿ.ಪಿ ದಾಖಲಿಸಿ I ಚಿm ಂgಡಿee ಜಿoಡಿ ಈಚಿಛಿe ಂuಣheಟಿಣiಛಿಚಿಣioಟಿ ಎಂದು ನಮೂದಿಸಿ, ಫಲಾನುಭವಿಯ ಮುಖದ ಛಾಯಾ ಚಿತ್ರವನ್ನು ಆಯ್ಕೆ ಮಾಡಿದ ನಂತರ Imಚಿge Suಛಿಛಿessಜಿuಟಟಥಿ Pಡಿoಛಿesseಜ ಎಂಬ ಮಾಹಿತಿಯೊಂದಿಗೆ e-ಏಙಅ Suಛಿಛಿessಜಿuಟಟ ಎಂಬ ಮಾಹಿತಿಯು ಗೋಚರಿಸುತ್ತದೆ.
ಯೋಜನೆಯ ಮುಂದಿನ ಕಂತುಗಳ ಆರ್ಥಿಕ ನೆರವು ಪಡೆಯಲು ಜೂನ್ 30 ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕಂದಾಯ ಇಲಾಖೆ, ಪಂಚಾಯತ್‌ರಾಜ್ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ರೇಷ್ಮೆ ಇಲಾಖೆ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.