ಪೆರ್ಡೂರು: ಅಂಬೇಡ್ಕರ್ ಜಯಂತಿ ಸ್ಕಾಲರ್ಶಿಪ್ ವಿತರಣೆ
ಪೆರ್ಡೂರು: ಬೈರಂಪಳ್ಳಿಯಲ್ಲಿ ದಲಿತ ಐಕ್ಯತಾ ಹೋರಾಟ ಸಮಿತಿ ವತಿಯಿಂದ ಹತ್ತನೇ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಚೆಕ್ಕುಗಳನ್ನು ವಿತರಿಸಲಾಯಿತು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೈರಂಪಳ್ಳಿ ಗ್ರಾಮ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ದಲಿತ ಐಕ್ಯತಾ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ ಮತ್ತು ಪರಮೇಶ್ವರ್ ಉಪ್ಪೂರು ರವರು ವಿದ್ಯಾರ್ಥಿ , ವಿದ್ಯಾರ್ಥಿನಿಯರಿಗೆ ಚೆಕ್ಕುಗಳನ್ನು ವಿತರಿಸಿದರು.
ಚೆಕ್ ವಿತರಿಸಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ತರ್ ಭೇಟಿ ಪಡಾವೋ ಭೇಟಿ ಬಚಾವೋ ಎಂದು ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬೊಗಳೆ ಬಿಡುತ್ತಿದ್ದಾರೆ.ದೇಶಾದ್ಯಂತ ಮಹಿಳೆಯರ ಮೇಲೆ ಹೆಣ್ಣು ಮಕ್ಕಳ ಮೇಲೆ ಅದರಲ್ಲೂ ನಮ್ಮ ದೇಶಕ್ಕಾಗಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ತಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗಲೂ ತುಟಿ ಬಿಚ್ಚದೆ ವಿದೇಶ ಪ್ರಯಾಣ ಮಾಡುತ್ತಿರುವುದು ನಮ್ಮ ದೇಶದ ದೌರ್ಬಾಗ್ಯ ಎಂದರು. ಆದ್ದರಿಂದ ಯಾರೋ ನಮ್ಮ ರಕ್ಷಣೆ ಉಧ್ದಾರ ಮಾಡುತ್ತಾರೆ ಎಂಬ ಭ್ರಮೆ ನಮಗೆ ಬೇಡಾ ನಮ್ಮ ಉದ್ದಾರ ಕೇವಲ ಶಿಕ್ಷಣದಿಂದ ಮಾತ್ರವೇ ಸಾಧ್ಯ ಎಂದರು.
ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಸುಮಾರು ಮೂರು ಲಕ್ಷಕ್ಕೂ ಆಧಿಕ ಸ್ಕಾಲರ್ಶಿಪ್ ಗಳನ್ನು ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಸ್ಕಾಲರ್ಶಿಪ್ ವಿತರಣಾ ಕಾರ್ಯಕ್ರಮದಲ್ಲಿ ಬೈರಂಪಳ್ಳಿ ಗ್ರಾಮ ಶಾಖೆಯ ಸಂಚಾಲಕರಾದ ಗುಣಕರ ಬೈರಂಪಳ್ಳಿ, ಸಂಘಟನಾ ಸಂಚಾಲಕರಾದ ಸುಖೇಶ ಬೈರಂಪಳ್ಳಿ, ಶಿವರಾಮ ಬೈರಂಪಳ್ಳಿ, ಮುದ್ದು ಕಡ್ತಲ ಮೊದಲಾದವರು ಉಪಸ್ಥಿತರಿದ್ದರು.