ಯು.ಕೆ. ಸಂಸದೆ ಸೀಮಾ ಮಲ್ಹೋತ್ರರಿಂದ ಯಕ್ಷಗಾನಕ್ಕೆ ವಿಶ್ವಮಾನ್ಯತೆ ಸಿಗುವ ಭರವಸೆ
ಲಂಡನ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಯೂರೋಪ್ ಪ್ರವಾಸದ ಮೊದಲ ದಿನವಾದ ಜೂನ್ 17 ರಂದು ಕನ್ನಡಿಗರು ಯು.ಕೆ ಆಶ್ರಯದಲ್ಲಿ ಲಂಡನ್ ನಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಯುನೈಟೆಡ್ ಕಿಂಗ್ಡಮ್ (ಯು.ಕೆ) ಸರಕಾರದ ಸಂಸದೆ ಸೀಮಾ ಮಲ್ಹೋತ್ರ, ಮತ್ತು ದೀಪಕ್ ಚೌಧರಿ ಸಚಿವರು (ಸಮನ್ವಯ) ಭಾರತದ ಹೈಕಮಿಷನ್ ಇವರು ಉದ್ಘಾಟಿಸಿದರು.
ಸಿಎಂಯಕ್ಷಗಾನವನ್ನು ನೋಡಿ ಆನಂದಿಸಿ,ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿ ಯಕ್ಷಗಾನದ ಈ ಕಲೆಗೆ ವಿಶ್ವಮಾನ್ಯತೆ ಸಿಗುವಲ್ಲಿ ನಮ್ಮ ಸಂಪೂರ್ಣ ಸಹಕಾರ ಇರುವುದಾಗಿ ಘೋಷಿಸಿದರು. ಕನ್ನಡಿಗರು ಯು.ಕೆ ಯ ಮುಖ್ಯಸ್ಥ ಗಣಪತಿ ಭಟ್, ಡಾ.ಅನಂತರಾಮ್ ಶೆಟ್ಟಿ, ಯುಎಸ್ ಎ ಘಟಕದ ಮುಖ್ಯಸ್ಥರು ಉಳಿ ಯೋಗೀಂದ್ರ ಭಟ್, ಫೌಂಡೇಶನ್ ತಂಡದ ಮುಖ್ಯಸ್ಥರು ಪಣಂಬೂರು ವಾಸು ಐತಾಳ್ ಯುಎಸ್ ಎ, ಫ್ರೊ ಎಂ ಎಲ್ ಸಾಮಗ ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ತಂಡದವರಿಂದ ಕೃಷ್ಣಲೀಲೆ ಕಂಸವಧೆ ಎನ್ನುವ ಪ್ರಸಂಗ ನಡೆಯಿತು.