ಸಾಲಗಾರ, ಜಾಮೀನು ಹಾಕಿದವರಿಗೆ ಬಂತು ಆರ್‌ಬಿಐ ಹೊಸ ರೂಲ್ಸ್! ತಕ್ಷಣವೇ ಜಾರಿಗೆ
ನವದೆಹಲಿ: ಸಾಮಾನ್ಯವಾಗಿ ಕೆಲವೊಮ್ಮೆ ಅತಿ ಅವಶ್ಯಕ ಸಂದರ್ಭದಲ್ಲಿ ಬ್ಯಾಂಕಿನಿಂದ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಹಾಗೆಯೇ ಬ್ಯಾಂಕ್ ಕೂಡ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಬೇರೆ ಬೇರೆ ರೀತಿಯ ಲೋನ್ ಕೂಡ ನೀಡುತ್ತದೆ ಆದರೆ ಬ್ಯಾಂಕ್ ನಲ್ಲಿ ಸಾಲ ಪಡೆಯುವುದಕ್ಕೆ ಮುಖ್ಯವಾಗಿ ಒಂದು ದಾಖಲೆಯ ಅಗತ್ಯವಿರುತ್ತದೆ ಅದೇ ಜಾಮೀನುದಾರರ ಗ್ಯಾರಂಟಿ. ನಿಮಗೆ ಸಾಲ ಕೊಡಲು ಯಾರಾದರೂ ಒಪ್ಪಿಗೆ ನೀಡಿದರೆ ಅಂದರೆ ಬೇರೊಬ್ಬರ ಸಹಿ ಇದ್ದರೆ ನಿಮ್ಮ ಇತರ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಮಗೆ ಸಾಲ ನೀಡಲಾಗುತ್ತದೆ.
ಜಾಮೀನು ಸಹಿ ಸುಲಭವಲ್ಲ: ಸಹಿ ಹಾಕುವುದು ಅಂದರೆ ಕೇವಲ ಅದು ಕಾಗದದ ಮೇಲೆ ಗೀಚುವ ಸಹಿ ಮಾತ್ರವಲ್ಲ ಒಬ್ಬರ ಸಾಲಕ್ಕೆ ನೀವು ಕೂಡ ಗ್ಯಾರಂಟಿ ನೀಡುತ್ತಿದ್ದೀರಿ ಎಂದು ಅರ್ಥ ಅಂದರೆ ಆತ ಸಾಲ ತೀರಿಸದೆ ಇದ್ದ ಪಕ್ಷದಲ್ಲಿ ಜಾಮೀನುದಾರ ಅದರ ಹೊಣೆ ತೆಗೆದುಕೊಳ್ಳಬೇಕಾಗುತ್ತದೆ. ಯಾವ ಬ್ಯಾಂಕ್ ಕೂಡ ತ್ವರಿತವಾಗಿ ಸಾಲ ನೀಡುವುದಿಲ್ಲ ಆದರೆ ಸಾಲ ಪಡೆದ ವ್ಯಕ್ತಿ ಸಾಲವನ್ನ ಮರುಪಾವತಿ ಮಾಡದೆ ಇದ್ದಲ್ಲಿ ಬ್ಯಾಂಕ್ ಜಾಮೀನುದಾರರ ಬಳಿ ಹೋಗುತ್ತದೆ.
ಸಾಲುಮರುಪಾವತಿಗೆ ಜಾಮೀನುದಾರನೆ ಹೊಣೆ:
ಭಾರತೀಯ ಒಪ್ಪಂದ ಕಾಯ್ದೆ 1872 ಸೆಕ್ಷನ್ 126 ರಲ್ಲಿ ಗ್ಯಾರಂಟಿ ಒಪ್ಪಂದಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ನೀಡಲಾಗಿದೆ. ಒಬ್ಬ ಸಾಲವನ್ನು ತೆಗೆದುಕೊಂಡ ನಂತರ ಆತ ಆ ಸಾಲವನ್ನು ಮರುಪಾವತಿ ಮಾಡದೇ ಇದ್ದಲ್ಲಿ ಗ್ಯಾರಂಟಿದಾರನೇ ಅದಕ್ಕೆ ಜವಾಬ್ದಾರಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ವ್ಯಕ್ತಿ ಯಾವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿದ್ದರೂ ಕೂಡ ಸಾಲ ತೆಗೆದುಕೊಂಡವನು ಮರುಪಾವತಿ ಮಾಡದೇ ಇದ್ದರೆ ಖಾತರಿದಾರರಿಂದ ಅಥವಾ ಜಾಮೀನು ಸಹಿ ಹಾಕಿದವರಿಂದ ಆ ಹಣವನ್ನು ಬ್ಯಾಂಕ್ ಹಿಂಪಡೆಯುತ್ತದೆ.
ಒಂದು ವೇಳೆ ಸಾಲದ ಬಡ್ದಿ ಹೆಚ್ಚಾಗಿ ಒಂದು ಕಂತೂ ಕೂಡ ಆ ವ್ಯಕ್ತಿ ತೀರಿಸದೇ ಇದ್ದಲ್ಲಿ, ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆದರೆ ಸಾಲತೆಗೆದುಕೊಂಡವನ ಬಳಿ ಆಸ್ತಿಯೂ ಇಲ್ಲದೇ ಇದ್ದಲ್ಲಿ ಅದಕ್ಕೆ ಜಾಮೀನುದಾರನೇ ಹೊಣೆ ಆಗುತ್ತಾನೆ. ಆತ ಹಣ ತೀರಿಸದೇ ಇದ್ದರೆ, ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ರೈಟ್ಸ್ ಕೂಡ ಬ್ಯಾಂಕ್ ಗೆ ಇರುತ್ತದೆ.
ಹಾಗಾಗಿ ಜಾಮೀನುದಾರ ನಾನು ಕೇವಲ ಸಹಿ ಹಾಕಿದ್ದೇನೆ ನಾನು ಯಾವುದೇ ಆಸ್ತಿಯನ್ನು ಅಡವಿಟ್ಟಿಲ್ಲ ಅಥವಾ ಯಾವುದೇ ಹಣಕಾಸಿಗೆ ಖಾತರಿ ನೀಡಿಲ್ಲ ಎಂದು ಭಾವಿಸಿ, ಸುಮ್ಮನಾದರೆ ಅದು ತಪ್ಪು. ಹಾಗಾಗಿ ನೀವು ಜಾಮೀನಿಗೆ ಸಹಿ ಹಾಕುವುದಕ್ಕೂ ಮೊದಲು ಸರಿಯಾಗಿ ವಿಚಾರ ಮಾಡಬೇಕು ನೀವು ಸಹಿ ಹಾಕುವಾಗ ನಿಮ್ಮ ಆಸ್ತಿಯ ಬಗ್ಗೆಯೂ ಮಾಹಿತಿ ನೀಡಿರುತ್ತೀರಿ ಎಂಬುದರ ಬಗ್ಗೆ ನೆನಪಿರಲಿ. ಸರಿಯಾಗಿ ಸಾಲ ತೀರಿಸಲು ಅರ್ಹರಾಗಿರುವವರು ಹಾಗೂ ನಿಮಗೆ ಚೆನ್ನಾಗಿ ತಿಳಿದಿರುವವರ ಸಾಲಕ್ಕೆ ಮಾತ್ರ ಜಾಮೀನುದಾರರಾಗಿ. ಸಹಿ ತಾನೇ ಹಾಕಿಬಿಟ್ಟರೆ ಸಮಸ್ಯೆ ಇಲ್ಲ ಎಂದುಕೊಂಡರೆ ಅದರಿಂದ ನೀವೇ ಸಮಸ್ಯೆ ಎದುರಿಸಬೇಕಾಗುತ್ತದೆ.