ಮಣಿಪಾಲ: ನಿಷೇಧಿತ ಮಾದಕ ದ್ರವ್ಯ ವಶ- ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಬ್ಬರ ಬಂಧನ

ಉಡುಪಿ: ಜಿಲ್ಲಾ ಎಸ್‌.ಪಿ ಅಕ್ಷಯ್ ಮಚ್ಚೀಂದ್ರ ಹಾಕೆ ಮಾರ್ಗದರ್ಶನದಲ್ಲಿ ಮಣಿಪಾಲ ಪಿಐ ದೇವರಾಜ್ ಟಿ.ವಿ ನೇತೃತ್ವದ ವಿಶೇಷ ತಂಡ ಡ್ರಗ್ಸ್‌ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದು, ಇಂದು ಮಣಿಪಾಲ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಈಶ್ವರ ನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡಲು ಪ್ರಯತ್ನದಲ್ಲಿದ್ದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.

ವಿದ್ಯಾರ್ಥಿಗಳ ಬಳಿ 35 ಸಾವಿರ ಮೌಲ್ಯದ 7.3 ಗ್ರಾಂ ಮೆಥಾಂಪೆಟಮೆನ್‌ (MDMA) ಮಾದಕ ದ್ರವ್ಯ ಪತ್ತೆಯಾಗಿದ್ದು, ಜೊತೆಗೆ 1.25 ಲಕ್ಷ ಮೌಲ್ಯದ ಡ್ಯೂಕ್‌ ಬೈಕ್‌ ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ನಿಭೀಷ್ (23) ಹಾಗೂ ಅಮಲ್‌, (22) ವಶಕ್ಕೆ ಪಡೆಯಲಾಗಿದೆ. ಸದರಿ ಈ ಇಬ್ಬರೂ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮೂಲತ: ಕೇರಳ ರಾಜ್ಯದ ನಿವಾಸಿಗಳಾಗಿರುತ್ತಾರೆ. ಇನ್ನೊಬ್ಬ ಆರೋಪಿ ಅಪ್ಸಿನ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.

Leave a Reply

Your email address will not be published. Required fields are marked *

error: Content is protected !!