ಉಡುಪಿ ತಾ.ಸವಿತಾ ಸಮಾಜದ ಮಾಜಿ ಅಧ್ಯಕ್ಷ ಕಟಪಾಡಿ ಕೇಶವ ಭಂಡಾರಿ ನಿಧನ
ಉಡುಪಿ: ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷರೂ, ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಸ್ಥಾಪಕ ನಿರ್ದೇಶಕರೂ, ಪ್ರಸ್ತುತ ಜಿಲ್ಲಾ ಸವಿತಾ ಸಮಾಜದ ಗೌರವ ಸಲಹೆಗಾರರಾಗಿದ್ದ ಕಟಪಾಡಿ ಕೇಶವ ಭಂಡಾರಿಯವರು ಅಸೌಖ್ಯದಿಂದ ಇಂದು ಇಹಲೋಕ ತ್ಯಜಿಸಿದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾoಜಲಿ ಸುವರ್ಣ ಕಟಪಾಡಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ವಿಶ್ವನಾಥ್ ಭಂಡಾರಿ ನಿಂಜೂರು, ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಕೋಶಾಧಿಕಾರಿ ಶೇಖರ್ ಸಾಲಿಯಾನ್,ಸಂಚಾಲಕರು ಆದ ಸತೀಶ್ ಭಂಡಾರಿ ಕಾಪು, ಸವಿತಾ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಆದ ನವೀನ್ ಚಂದ್ರ ಭಂಡಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾಲತಿ ಅಶೋಕ್, ಸಿಬಂದಿ ವರ್ಗ, ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷರು ಆದ ಶಂಕರ್ ಸಾಲಿಯಾನ್, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸ ರರಾದ ಸುಭಾಸ್ ಭಂಡಾರಿ, ಪೂಜಾ ಸಮಿತಿ ಸಂಚಾಲಕರು ಆದ ಅಶೋಕ್ ಭಂಡಾರಿ ಕುತ್ಪಾಡಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮುಲ್ಕಿ ಪದಾಧಿಕಾರಿಗಳು,ಜಿಲ್ಲೆಯ ಸವಿತಾ ಬಂದುಗಳು ಹಾಗೂ ಅವರ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂತಾಪ ಸಲ್ಲಿಸಿದ್ದಾರೆ.