ನ್ಯಾಶನಲ್ ಸೆಮಿನಾರ್ ಮಂಡನೆಗೆ ಅಲ್-ಇಹ್ಸಾನ್ ದಅವಾ ವಿದ್ಯಾರ್ಥಿಗಳು ಆಯ್ಕೆ
ಬೆಂಗಳೂರಿನ ಕೆ.ಎಲ್.ಇ ಕಾನೂನು ಕಾಲೇಜು ಆಯೋಜಿಸಿದ್ದ ರಾಷ್ಟೀಯ ಸಮ್ಮೇಳನ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಅಲ್ ಇಹ್ಸಾನ್ ದಅವಾ ಕಾಲೇಜು ವಿದ್ಯಾರ್ಥಿಗಳಾದ ಅಬ್ದರ‍್ರಹ್ಮಾನ್ ಹಿಶಾಂ,ಅಬ್ದುಲ್ ರಾಫೀಹ್, ಮುಹಮ್ಮದ್ ನಿಹಾದ್,ಅಹ್ಮದ್ ಸಾಬೀತ್ ಕೃಷ್ಣಾಪುರ,ಅಹ್ಮದ್ ಅಫ್ಳಳ್‌ರವರು ಮಾದರಿ ಬರಹದ ಮೂಲಕ ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ ಆಯ್ಕೆಯಾಗಿದ್ದಾರೆ.
ವರ್ಷಂಪ್ರತಿ ನಡೆಸಲಾಗುವ ಇ ಸಮ್ಮೇಳನದಲ್ಲಿ ರಾಷ್ಟ್ರದ ಉನ್ನತ ಚಿಂತಕರು, ಉಪನ್ಯಾಸಕರು, ಬುದ್ಧಿಜೀವಿಗಳು ಭಾಗವಹಿತ್ತಾರೆ.
ಇಸ್ಲಾಂ ಮತ್ತು ಲಿಂಗ ತಾರತಮ್ಯ , ಉಗ್ರವಾದ ಎದುರಿಸುವಲ್ಲಿ ಇಸ್ಲಾಮಿನ ಪಾತ್ರ, ಮಲಬಾರ್ ಮುಸ್ಲಿಂ ವಿದ್ವಾಂಸರ ರಾಜಕೀಯ ವಿಧಾನ, ಇಸ್ಲಾಂ ಮತ್ತು ಜಾತ್ಯತೀತತೆ, ಭಾರತೀಯ ಮುಸಲ್ಮಾನರ ಸಮಸ್ಯೆಗಳಿಗೆ ಸಂವಿಧಾನತ್ಮಕ ಪರಿಹಾರ ಎಂಬಿ ವಿಷಯಗಳಲ್ಲಿ ಪ್ರಬಂಧ ಮಂಡಿಸಲಿದ್ದಾರೆ.