ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್: ಯುರೋಪ್ ಯಕ್ಷಗಾನ ಅಭಿಯಾನ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಜೂನ್ 15 ರಿಂದ ಯುರೋಪ್ ಯಕ್ಷಗಾನ ಅಭಿಯಾನ ನಡೆಯಲಿದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಕ್ಷಗಾನ ಅಭಿಯಾನದಲ್ಲಿ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದೆ ಎಂದರು.ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಜೂನ್ ತಿಂಗಳಲ್ಲಿ ಲಂಡನ್, ಮಿಡ್ಲ್ಯಾಂಡ್, ದುರಾಅಮ್, ಲೀಡ್ಸ್, ಎಡಿನ್ ಬಗ್೯, ಸ್ಕಾಟ್ಲಂಡ್ ಮೊದಲಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಪ್ರವಾಸದ ನೇತೃತ್ವ ವಹಿಸಿರುವ ಪಣಂಬೂರು ವಾಸು ಐತಾಳ್ ತಿಳಿಸಿದರು.

ಆಗಸ್ಟ್ ತಿಂಗಳಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫಟ್೯, ಮುನಿಚ್, ಜರ್ಮನಿ, ಬಿಲ್ಲಿಂಗಾಮ್, ದುರಾಹಮ್ ಮೊದಲಾದ ಕಡೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪಣಂಬೂರು ವಾಸು ಐತಾಳ್ USA ಇವರ ನೇತೃತ್ವದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತರೊಂದಿಗೆ ಪ್ರೋ ಎಂ ಎಲ್ ಸಾಮಗ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ, ಪದ್ಯಾಣ ಚಂದ್ರಶೇಖರ ಪೂಜಾರಿ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ್ ಪೂಜಾರಿ ಬೆಳ್ಳಿಪಾಡಿ ಕಲಾವಿದರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರೋ. ಎಂ.ಎಲ್ ಸಾಮಗ, ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!