ಖ್ಯಾತ ಸ್ಯಾಕ್ಷೋಪೋನ್ ವಾದಕ ಅಲೆವೂರು ಸುಂದರ ಸೇರಿಗಾರ ಇನ್ನಿಲ್ಲ
ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ಸ್ಯಾಕ್ಷೋಪೋನ್ ವಾದಕ ಅಲೆವೂರು ಸುಂದರ ಸೇರಿಗಾರ(71) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಮೂವರು ಪುತ್ರಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ತಮ್ಮ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಇವರು ಓಬು ಸೇರಿಗಾರ್ ಅಲೆವೂರು ಉತ್ಸವಕ್ಕೆ ಸಾಕ್ಸೋಫೋನ್ ನುಡಿಸಲು ಬಂದಾಗ, ಅವರು ನುಡಿಸುವುದನ್ನು ನೋಡಿ ಸುಂದರ್ ಸೇರಿಗಾರ್‌ರಿಗೆ ಸಾಕ್ಸೋಫೋನ್ ವಾದಕದ ಮೇಲೆ ಆಸಕ್ತಿ ಬೆಳೆದಿರುತ್ತದೆ. ಇದನ್ನು ತಿಳಿದ ಸುಂದರ ಶೇರಿಗಾರ್ ಅವರ ತಾಯಿ ಹಾಗೂ ಅಣ್ಣ ಓಬು ಶೇರಿಗಾರರ ಬಳಿ ಸಾಕ್ಸೋಫೋನ್‌ನನ್ನು ನುಡಿಸಲು ಅಭ್ಯಾಸ ಮಾಡಿದ್ದಾರೆ.
ಮುಂದೆ ಓಬು ಸೇರಿಗಾರ್ ಅವರೊಂದಿಗೆ ಸುಂದರ ಶೇರಿಗಾರರು ತುಂಬಾ ಕಡೆಗಳಲ್ಲಿ ಉತ್ಸವ ಹಾಗೂ ಕಾರ್ಯಕ್ರಮಗಳಲ್ಲಿ ಸಾಕ್ಸೋಫೋನ್ ವಾದಕವನ್ನು ನುಡಿಸಿದ್ದಾರೆ. ಉಡುಪಿ ಸಂಗೀತ ವಿದ್ವಾನ್ ವಾಸ್ತಯ್ಯ ಭಟ್ ಅವರ ಬಳಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಅಷ್ಟಲ್ಲದೇ ಮದ್ದೂರು ಸುಬ್ರಮ್ಯಣ್ಯಂ ಅವರೊಂದಿಗೆ ಕೂಡ ಸಂಗೀತ ಅಭ್ಯಾಸ ಮಾಡಿದ್ದಾರೆ. ಒಳ್ಳೆಯ ಗುರುಗಳೊಂದಿಗೆ ಸಂಗೀತ ಅಭ್ಯಾಸ ಮಾಡಿ ಸುಂದರ ಸೇರಿಗಾರ್‌ರು ತಾವು ಕಲಿತ ವಿದ್ಯೆಯನ್ನು ಅಪಾರ ಸಂಖ್ಯೆ ಶಿಷ್ಯಯಂದಿರಿಗೆ ಧಾರೆ ಎರೆದಿದ್ದಾರೆ. ಅಷ್ಟೇ ಅಲ್ಲದೇ ಇವರಿಗೆ ಗೌರವ ಡಾಕ್ಟರೇಟ್‌ನೊಂದಿಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ.
ಮೃತ ಸುಂದರ ಸೇರಿಗಾರ್‌ರು ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯವಾದ ಸತಾರದಲ್ಲಿ ಇರುವ ನಟರಾಜ ಮಂದಿರದಲ್ಲಿ ಸಾಕ್ಸೋಫೋನ್ ನುಡಿಸಿ ಸನ್ಮಾನವನ್ನು ಪಡೆದಿದ್ದಾರೆ. ಸುಂದರ ಸೇರಿಗಾರ್‌ರ ಅವರ ಸಾಕ್ಸೋಫೋನ್ ವಾದಕಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತ ಸ್ಯಾಕ್ಸೋಫೋನ್ ವಾದಕರು, ನೂರಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ವಾದನ ಕಲಿಸಿದವರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಲೆವೂರು ಸುಂದರ ಸೇರಿಗಾರ್ ರವರು ನಮ್ಮನ್ನಗಲಿದ್ದಾರೆ.