ಸರಕಾರದಿಂದ ಬಿಲ್ ಬಾಕಿ: ಪೊಲೀಸರ ಆರೋಗ್ಯ ಭಾಗ್ಯ ಯೋಜನೆ ಸ್ಥಗಿತ?
ಮಣಿಪಾಲ: ಕೊರೊನಾ ವಾರಿಯರ್ಸ್ ಪೊಲೀಸರಿಗೆ ಕೊರೊನಾ ಮತ್ತು ಇತರೆ ಯಾವುದೇ ಕಾಯಿಲೆ ಬಂದ್ರೂ ಚಿಕಿತ್ಸೆ ಸಿಗದಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಿಂದ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಚಿಕಿತ್ಸೆ ಸಿಗುತ್ತದೆಂದು ಪೊಲೀಸರು ಆಸ್ಪತ್ರೆಗೆ ದಾಖಲಾದ್ರೆ ಚಿಕಿತ್ಸೆಯ ವೆಚ್ಚವನ್ನು ಅವರೇ ಬರಿಸಬೇಕಾದ ಪರಿಸ್ಥಿತಿ ಬಂದಿದೆ.
ಯಾಕೆಂದ್ರೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತಾತ್ಕಲಿಕವಾಗಿ ಮುಂದಿನ ಆದೇಶದವರೆಗೆ ಪೊಲೀಸರ ಚಿಕಿತ್ಸೆಗಾಗಿ ಲಭ್ಯವಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ಸ್ಥಗಿತ ಮಾಡಿರುವುದಾಗಿ ಆದೇಶಿಸಿದೆ. ಈ ಆದೇಶವನ್ನು ಮಣಿಪಾಲನ ಕಸ್ತೂರ್ಬಾ ವೈದ್ಯಕೀಯ ಅಧೀಕ್ಷಕರು ಹೊರಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳು ಇದೇ ರೀತಿ ಆದೇಶ ಹೊರಡಿಸಿದ್ರೂ ಆಶ್ಚರ್ಯವಿಲ್ಲ. ಕೋವಿಡ್ ವೈರಸ್ ಸೋಂಕಿದ್ದರು, ಯಾವುದೇ ರೀತಿಯ ಸೌಲಭ್ಯ ಪೊಲೀಸರಿಗೆ ಸಿಗೋದಿಲ್ವಂತೆ . ಆಗಸ್ಟ್ 31 ರಿಂದಲ್ಲೇ ಸ್ಥಗಿತ ಮಾಡಿ ಆದೇಶಿಸಲಾಗಿದೆ.
ಸರ್ಕಾರ ಇತ್ತ ಗಮನಹರಿಸಬೇಕಿದೆ. ಆರೋಗ್ಯ ಭಾಗ್ಯ ಯೋಜನೆಯನ್ನೇ ನಂಬಿಕೊಂಡಿರುವ ಪೊಲೀಸ್ ಕುಟುಂಬಗಳಿಗೆ ಈ ಯೋಜನೆ ಲಾಭ ಸಿಗದೇ ಹೋದರೆ ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ಬರುತ್ತದೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೀಗಾಗಿ ಆರೋಗ್ಯ ಭಾಗ್ಯ ಯೋಜನೆಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಒದಗಿಸಬೇಕು ಎಂದು ಪೊಲೀಸ್ ಸಿಬ್ಬಂದಿ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಆದೇಶ ಹಿಂಪಡೆಯುವಂತೆ ಆಸ್ಪತ್ರೆಗೆ ಸೂಚಿಸಬೇಕಿದೆ ಪೊಲೀಸರಿಂದ ಒತ್ತಾಯದ ಮಾತು ಕೇಳಿ ಬರುತ್ತಿದೆ.
ಈ ಬಗ್ಗೆ ‘ಉಡುಪಿ ಟೈಮ್ಸ್’ ಗೆ ಪ್ರತಿಕ್ರಿಯಿಸಿದ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯಸ್ಥರು, ಸರಕಾರದಿಂದ ಈಗಾಗಲೇ ನೀಡಿರುವ ಚಿಕಿತ್ಸಾ ವೆಚ್ಚ ಹಣ ನೀಡಲು ಬಾಕಿ ಇರುವ ಕಾರಣದಿಂದ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡುವುದು ಸ್ಥಗಿತ ಗೊಳಿಸಿರುವುದಾಗಿ ತಿಳಿಸಿದ್ದಾರೆ.