ಕುಕ್ಕರ್‌ ಸ್ಫೋಟ: ಒಡಿಶಾದಲ್ಲಿ 5ನೇ ಆರೋಪಿ ಪ್ರೀತಮ್‌ಕರ್ ಸೆರೆ

ಭುವನೇಶ್ವರ: ಕಳೆದ ವರ್ಷ ಮಂಗಳೂರಿನಲ್ಲಿ ಆಟೋದಲ್ಲಿ ನಡೆದ ಕುಕ್ಕರ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಪ್ರೀತಮ್‌ ಕರ್‌ನನ್ನು (31) ಜೈಪುರ ಜಿಲ್ಲೆಯ ಭುರುಂಗ ಹಳ್ಳಿಯಲ್ಲಿ ಬಂಧಿಸಲಾಗಿದೆಂದು‌ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸದ್ಯ ಬಂಧಿತನಾಗಿರುವ ಶಾರಿಕ್‌ಗೆ ಸಿಮ್‌ ಕಾರ್ಡ್‌, ಮೊಬೈಲ್‌ ನೀಡಿದ ಆರೋಪ ಆತನ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ 5ನೇ ವ್ಯಕ್ತಿ ಈತ.

ಕಳೆದ 5 ವರ್ಷಗಳಿಂದ ಅಕ್ರಮ ಚಟುವಟಿಕೆಯನ್ನು ಪ್ರೀತಮ್‌ ಮತ್ತವನ ಸಹಚರರು ಮಾಡಿಕೊಂಡು ಬರುತ್ತಿದ್ದಾರೆ. ಕದ್ದ ಮಾಹಿತಿಗಳನ್ನು ಬಳಸಿ ಸಿದ್ಧಪಡಿಸಿದ ಬ್ಯಾಂಕ್‌ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದು, ಒಟಿಪಿಗಳನ್ನು ಹಂಚಿಕೊಳ್ಳುವುದು, ಸೈಬರ್‌ ಅಪರಾಧಿಗಳೊಂದಿಗೆ ಡಿಜಿಟಲ್‌ ವ್ಯಾಲೆಟ್‌ ಗಳನ್ನು ಹಂಚಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಎರಡು ಬಾರಿ ಐಎಸ್‌ಐ ಏಜೆಂಟ್‌ಗಳನ್ನು ನೇರವಾಗಿ ಭೇಟಿ ಮಾಡಿ ಇತ್ತೀಚೆಗೆ 1.5 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ ಎಂದು ಒಡಿಶಾದ ವಿಶೇಷ ಕಾರ್ಯಪಡೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!