ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ವಂಚನೆ
ಉಡುಪಿ, ಜೂ.13: ಮುಂಬೈ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆರ್ಗದ ಸಾಫ್ಟ್‌ವೇರ್ ಇಂಜಿನಿಯರ್ ರೋಶನ್ ಕೋಟ್ಯಾನ್(26) ಎಂಬವರ ಮೊಬೈಲ್‌ಗೆ ಜೂ.12 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಕೊರಿಯರ್ ಸಂಸ್ಥೆಯವರೆಂದು ತಿಳಿಸಿ, ನಿಮ್ಮ ಮೊಬೈಲ್ ನಂಬ್ರನಲ್ಲಿ ಅಕ್ರಮ ಮಾದಕ ವಸ್ತು ಎಂಡಿಎಂಎ ಇರುವ ಪಾರ್ಸೆಲ್ ಬಗ್ಗೆ ಕೇಸ್ ದಾಖಲಾಗಿದ್ದು, ಈ ಬಗ್ಗೆ ನಾರ್ಕೋಟಿ್ರಸ್ಟ್ ಬ್ಯೂರೋ ಮುಂಬೈಗೆ ದೂರು ನೀಡುವಂತೆ ತಿಳಿಸಿ ಸ್ಟೈಪ್ ಐಡಿ ನೀಡಿದ್ದನು.
ನಂತರ ರೋಶನ್, ಸ್ಕ್ರಿಪ್ ಮೂಲಕ ಮಾತನಾಡಿದಾಗ ತಾವುಗಳು ಮುಂಬೈ ಪೊಲೀಸ್ ಅಧಿಕಾರಿಗಳು ಎಂದು ನಂಬಿಸಿ, ನಿಮ್ಮ ಆಧಾರ್ ನಂಬ್ರನಲ್ಲಿ ಅಕ್ರಮ ಹಣ ವರ್ಗಾವಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಅಲ್ಲದೆ ಈ ಬಗ್ಗೆ ಹಣ ಕಳುಹಿಸುವಂತೆ ಸೂಚಿಸಿದ್ದು, ಹಾಗೆ ರೋಶನ್, ಒಟ್ಟು 49,554ರೂ. ಹಣವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಈ ಮೂಲಕ ಆರೋಪಿಗಳು ರೋಶನ್ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.