ಬಿಜೆಪಿಯ ಉರಿ ಶಮನಕ್ಕಾಗಿ “ಬರ್ನಲ್ ಭಾಗ್ಯ” ಕೊಡುವ ಬಗ್ಗೆ ಚಿಂತನೆ: ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ “ಬರ್ನಲ್ ಭಾಗ್ಯ” ಕೊಡುವ ಬಗ್ಗೆ ಚಿಂತಿಸುತ್ತೇವೆ ಎಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಮಹಿಳೆಯರಿಗೆ ಉಚಿತ ಯೋಜನೆ ಜಾರಿಯಾದ ಮರುದಿನವೇ ಬಾಲಕಿಯೊಬ್ಬಳು ಸರ್ಕಾರಿ ಬಸ್ ನಿಂದ ಬಿದ್ದು ಸಾವನ್ನಪ್ಪಿದ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಮಾಡಿದ ಟ್ವೀಟ್ ಗೆ ಕಾಂಗ್ರೆಸ್ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.

ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ “ಬರ್ನಲ್ ಭಾಗ್ಯ” ಕೊಡುವ ಬಗ್ಗೆ ಚಿಂತಿಸುತ್ತೇವೆ. ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಮಾಡಿ, ನೋಟು ನಿಷೇಧ ಮಾಡಿ ಸತ್ತ ನೂರಾರು ಮಂದಿಯ ಬಗ್ಗೆ ಈ ಕಾಳಜಿ ಇರಲಿಲ್ಲವೇಕೆ?

ಹೆಚ್ಚುವರಿ ಬಸ್ ಗಳನ್ನು ಖರೀದಿಸಲು ಚಿಂತಿಸುತ್ತಿದ್ದೇವೆ, ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Leave a Reply

Your email address will not be published. Required fields are marked *

error: Content is protected !!