ಮಣಿಪಾಲ: ಕುಸಿಯುವ ಭೀತಿಯಲ್ಲಿರುವ ಬೃಹತ್ ಕಟ್ಟಡ
ಮಣಿಪಾಲ: (ಉಡುಪಿಟೈಮ್ಸ್ ವರದಿ)ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮಣಿಪಾಲದ ಮುಖ್ಯ ರಸ್ತೆಯಲ್ಲಿರುವ ಎಂಟು ಮಹಡಿಯು ಬೃಹತ್ ವಸತಿ ಸಮುಚ್ಚಯವು ಕುಸಿಯುವ ಭೀತಿಯಲ್ಲಿದೆ.
ಉಡುಪಿಯಿಂದ ಮಣಿಪಾಲ ಪ್ರವೇಶಿಸಿಸುವಾಗ ಕುಂಡೆಲ್ ಕಾಡಿನಲ್ಲಿರುವ ಬೃಹತ್ ಕಟ್ಟಡಕ್ಕೆ ಮಳೆ ನೀರು ಹರಿಯುತ್ತಾ ಹೋಗಿ ಬೀಳುತ್ತಿದ್ದ ಪರಿಣಾಮ ಕಟ್ಟಡ ಕುಸಿಯುವ ಸಾಧ್ಯತೆ ಇದೆ.
ಪ್ರೀಮಿಯರ್ ಎನ್‌ಕ್ಲೇವ್ ಬೃಹತ್ ಕಟ್ಟಡದ ತಳ ಅಂತಸ್ತಿಗೆ ನಿರಂತರ ಮಳೆ ನೀರು ಹರಿಯುತ್ತ ಹೋದ ಪರಿಣಾಮ ಗುಡ್ಡದ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಕಟ್ಟಡದ ಪಿಲ್ಲರ್ ಸುತ್ತ ಮಣ್ಣು ಕುಸಿಯುತ್ತಿದೆ.
ಈ ಕಟ್ಟಡದಲ್ಲಿ ಹಲವು ವಾಣಿಜ್ಯ ಮಳಿಗೆ ಮತ್ತು 32 ಮನೆಗಳು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸಿಸುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಕಟ್ಟಡದಲ್ಲಿರುವ ನಿವಾಸಿಗಳನ್ನು ಮಣಿಪಾಲ ಪೊಲೀಸರು ತೆರವುಗೊಳಿಸುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಇದೇ ಕುಂಡೆಲ್ ಕಾಡು ಪ್ರದೇಶದಲ್ಲಿ ಗುಡ್ಡ ಕುಸಿದು ಐನಾಕ್ಸ್ ಚಿತ್ರಮಂದಿರ ತಿಂಗಳುಗಟ್ಟಲೆ ಮುಚ್ಚಿತ್ತು.
ಸ್ಥಳಕ್ಕೆ ತಹಶೀಲ್ದಾರದ ಪ್ರದೀಪ್ ಕುರ್ಡೇಕರ್ ಹಾಗು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ನಗರಸಭಾ ಎಂಜಿನಿಯರ್ ಧಾವಿಸಿದ್ದಾರೆ
ಇಂತಹಾ ದುರಂತಗಳಿಗೆ ನಾವೇ ಕಾರಣರೇ ಹೊರತು ಪ್ರಕೃತಿಯಲ್ಲ ಎಂಬ ಸತ್ಯವನ್ನು ಈಗಲಾದರೂ ನಾವು ತಿಳಿಯಬೇಕು.ಮಾನವನ ಸ್ವಾರ್ಥ ಕ್ಕೆ ಇಡೀ ಪ್ರಕೃತಿ ಇಂದು ಆಕ್ರೋಷಗೊಂಡಂತಿದೆ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದ ಈ ನಗರೀಕರಣವೇ ಇಂತಹಾ ದುರಂತಗಳಿಗೆ ಕಾರಣ ಎಂಬುದನ್ನು ಎಲ್ಲಿಯವರೆಗೆ ನಮಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಇಂತಹಾ ದುರಂತಗಳು ಅವ್ಯಾಹತವಾಗಿ ಜರುಗುತ್ತಿರುತ್ತವೆ.