ಉಡುಪಿ: ಜೂ.12ರಂದು ಶ್ರೀರಾಮ್ ಫೈನಾನ್ಸ್ ಲಿ. ಇದರ ನೂತನ ಶಾಖೆ ಉದ್ಘಾಟನೆ
ಉಡುಪಿ: ಬನ್ನಂಜೆ ಬರೋಡ ಬ್ಯಾಂಕ್‌ನ ಎದುರುಗಡೆ ಸುರಭಿ ಐಕಾನ್ ಕಟ್ಟಡದಲ್ಲಿ ಇದ್ದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಅಂಬಲಪಾಡಿ ಜಂಕ್ಷನ್ – ಬ್ರಹ್ಮಗಿರಿ ರಸ್ತೆಯಲ್ಲಿ ಇರುವ ಸುರಭಿ ಲೋಟಸ್‌ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಿದ್ದು, ಇದರ ಉದ್ಘಾಟನಾ ಸಮಾರಂಭವು ಜೂನ್ 12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಜೆ.ಎಂ.ಡಿ ಸುದರ್ಶನ್ ಹೊಳ್ಳ, ಶರತ್ ಚಂದ್ರ ಭಟ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಕಾಂಚನ್ ಮೋಟಾರ್ಸ್ ಮಾಲಕರಾದ ಪ್ರಸಾದ್ ಕಾಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ರಾಮ್ ಫೈನಾನ್ಸ್ ಸಂಸ್ಥೆಯಲ್ಲಿ ಹೊಸ ಮತ್ತು ಹಳೆ ವಾಹನಗಳಿಗೆ ಸಾಲ ನೀಡುವ ಜೊತೆ, ದ್ವಿಚಕ್ರ ವಾಹನ, ಚಿನ್ನದ ಮೇಲೆ ಸಾಲ, ವೈಯಕ್ತಿಕ ಸಾಲ, ಜಾಗದ ಅಡಮಾನದ ಮೇಲೆ ಸಾಲ ನೀಡುವ ಸೌಲಭ್ಯ ಕೂಡ ಲಭ್ಯ ಇರುತ್ತದೆ.