ಕಾರ್ಕಳ: ಬಸ್-ಬೈಕ್ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು
ಕಾರ್ಕಳ: ಉಡುಪಿ ಕಾರ್ಕಳ ಮುಖ್ಯರಸ್ತೆಯಲ್ಲಿ ತಾಲ್ಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕಿನ ಬಳಿ ಗುರುವಾರ ನಡೆದ ಬೈಕ್ ಹಾಗೂ ಬಸ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಜಾರ್ಕಳ ನೆಲ್ಲಿಗುಡ್ಡೆ ನಿವಾಸಿ ಕಾರ್ತಿಕ್ (23 ) ಮೃತಪಟ್ಟರು. ಕಾರ್ತಿಕ್ ಬೈಲೂರಿನಿಂದ ಜಾರ್ಕಳದ ಕಡೆಗೆ ಹೋಗುತ್ತಿದ್ದಾಗ ಕಾರ್ಕಳದಿಂದ ಉಡುಪಿಯತ್ತ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.