ಎಚ್ ಮೋಹನ್ ಉಡುಪ ಹಂದಾಡಿಗೆ “ಯಶೋ ಮಾಧ್ಯಮ ಪ್ರಶಸ್ತಿ”
ಬೆಂಗಳೂರಿನ ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆಯು ನೀಡುವ “ಯಶೋ ಮಾಧ್ಯಮ 2023” ಪ್ರಶಸ್ತಿಗೆ ಬ್ರಹ್ಮಾವರದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಎಚ್. ಮೋಹನ ಉಡುಪ ಹಂದಾಡಿ ಅವರು ಭಾಜನರಾಗಿದ್ದಾರೆ.
ದಿನಾಂಕ 10.06.2023ರಂದು ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಿರಿಯಾರ ಗಣೇಶ್ ನಾಯಕ್, ಕುಮಾರ್ ಚಂದ್ರ (ಡಿವೈಎಸ್ಪಿ), ರವೀಂದ್ರ, ಯು.ಲೋಕೇಶ್ ಪೂಜಾರಿ, ಸಂತೋಷ್ ಕಾಮತ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು.