ಶಂಕರಪುರ: ಉಚಿತ ನೀರು ಸರಬರಾಜು
ಶಂಕರಪುರ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್‌ನ ಆತಿಥ್ಯದಲ್ಲಿ ಶಂಕರಪುರ ಇನ್ನಂಜೆ ಗ್ರಾಮದಲ್ಲಿ ನೀರಿನ ಅಭಾವ ಇರುವ ಮನೆಗಳಿಗೆ ಉಚಿತ ಕುಡಿಯುವ ನೀರು ಒದಗಿಸುವ ಕಾರ್ಯಕ್ರಮವನ್ನು ಸೀನಿಯರ್ ನವೀನ್ ಅಮೀನ್ (ಅಂತಾರಾಷ್ಟ್ರೀಯ ಉಪಾಧ್ಯಕ್ಷರು)ಉದ್ಘಾಟಿಸಿದರು.
ಲೀಜನ್ ಅಧ್ಯಕ್ಷ ಆಲ್ವಿನ್ ಮೆನೇಜಸ್, ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ. ನೀರು ಮತ್ತು ವಾಹನವನ್ನು ಉಚಿತವಾಗಿ ನೀಡಿದ ಸೀನಿಯರ್ ಡೆಂಜಿಲ್ ಕಾಸ್ಟಲೀನೋ, ಸಂತೋಷ ಕುಮಾರ್ ದೊಡ್ಮನಿ, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು. ಮಳೆ ಬರುವ ತನಕ ನೀರಿನ ಸರಬರಾಜು ವ್ಯವಸ್ಥೆಯನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.