ಕಾಂಗ್ರೆಸ್ ನಾಯಕ ಕಿರಣ್ ಕುಮಾರ್ ಉದ್ಯಾವರ ಬಿಜೆಪಿ ಸೇರ್ಪಡೆ
ಉಡುಪಿ ( ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ನ ಕಾರ್ಯದರ್ಶಿ, APMC ಸದಸ್ಯ, ಮಾಜಿ ತಾಲೂಕು ಹಾಗೂ ಗ್ರಾಮ ಪಂಚಾಯ್ತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಇಂದು ಶಾಸಕ ಲಾಲಾಜಿ ಆರ್ ಮೆಂಡನ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಯುವ ಕಾಂಗ್ರೆಸ್ ಕಾಪು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಕಿರಣ್, ಉದ್ಯಾವರಹಿತ್ಳು ಮೊಗವೀರ ಗ್ರಾಮ ಸಭಾದ ಉಪಾಧ್ಯಕ್ಷ, ಹಾಗು ಹದಿನಾಲ್ಕು ಪಟ್ನ ಮೊಗವೀರ ಗ್ರಾಮ ಸಭಾದ ಕಮಿಟಿ ಸದಸ್ಯರಾಗಿದ್ದು, ಗ್ರಾಮ ಪಂಚಾಯತ್ ಚುನಾವಣೆಯ ಸಮೀಪದಲ್ಲಿಯೇ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಉದ್ಯಾವರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತಂದಿದೆ ಎನ್ನಲಾಗಿದೆ.
ಇಂದು ಕಾಪು ಶಾಸಕರಾದ ಲಾಲಾಜಿ ಮೆಂಡನ್ ರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತಕ್ಕೆ ಒಪ್ಪಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮದ ಪರಿವಾರ ಪ್ರಮುಖರಾದ, ಕಾಪು ಕ್ಷೇತ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಬೋಳ್ಜೆ, ಉದ್ಯಾವರ ಬಿಜೆಪಿ ಸ್ಥಾನೀಯ ಮಾಜಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷರಾದ ವಿಲ್ಸನ್ ರಾಜಕುಮಾರ್, Apmc ಹಾಗೂ ಉದ್ಯಾವರ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಉದ್ಯಾವರ, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಾಧಾಕೃಷ್ಣ ಬೋಳ್ಜೆ, ಉಡುಪಿ ತಾಲೂಕು ಪಂಚಾಯ್ತ್ ಮಾಜಿ ಉಪಾಧ್ಯಕ್ಷರಾದ ಗಣೇಶ್ ಕುಮಾರ್ ಹಾಗೂ ಉದ್ಯಾವರ ಸ್ಥಾನೀಯ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಿನೋದ್ ಕುಮಾರ್ ಹಾಗೂ ಮಾಜಿ ಸದಸ್ಯರಾದ ಸೋಮನಾಥ್ ದೇವಾಡಿಗ ಹಾಗೂ ಪರಮೇಶ್ವರ್ ಉಪಸ್ಥಿತರಿದ್ದರು.
ಅವರು ಮೊದಲಿಂದಲೂ ಬಿಜೆಪಿ ಇದು ಬಾರೇ ನಾಟಕ ಎಪಿಎಂಸಿ ಚುನಾವಣೆ ಗೋಸ್ಕರ ಮಾತ್ರ ಕಾಂಗ್ರೆಸ್ ಅಂತ ಹೇಳಿದ್ದು. ಇದರಿಂದ ಯಾವುದೇ ವ್ಯಾತ್ಯಸ ಕಾಂಗ್ರೆಸ್ ಮೇಲೆ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದ ಹಾಗೆ ಇಂತವರು ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಮ