ರೈಲು ಅಪಘಾತಕ್ಕೆ ಕಾರಣನಾದ ಸ್ಟೇಷನ್ ಮಾಸ್ಟರ್ ಷರೀಫ್ ನಾಪತ್ತೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಬಾಲಾಸೋರ್ ರೈಲು ಅಪಘಾತಕ್ಕೆ ಕಾರಣನಾದ ಸ್ಠಷನ್ ಮಾಸ್ಟರ್ ಷರೀಫ್ ಎಂಬುವವರು ನಾಪತ್ತೆಯಾಗಿದ್ದಾರೆ ಎಂದು ಪ್ರತಿಪಾದಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್, ಷರೀಫ್ ಅಪಘಾತ ನಡೆದ ಕೆಲವೇ ಸಮಯದ ನಂತರ ತಲೆಮರೆಸಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ರೈಲು ಅಪಘಾತದ ತನಿಖೆಗೆ ಆದೇಶಿದ ನಂತರ “ಶರೀಫ್” ಎಂಬ ಸ್ಟೇಷನ್ ಮಾಸ್ಟರ್ ತಲೆಮರಸಿ ಕೊಂಡಿದ್ದಾರೆ. ಇದೇ ಈ ಸಮುದಾಯದ ಸಮಸ್ಯೆ. ಎಂಬ ಶಿರ್ಷಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ವಿವೇಕ್ ಪಾಂಡೆ ಎಂಬ ಟ್ವಿಟರ್ ಬಳಕೆದಾರರೊಬ್ಬರು “ಶರೀಫ್ ಹೆಸರನ್ನು ಹೆಸರಿಸಿ. ಪೋಸ್ಟ್ ಮಾಡಿದ್ದು ಸ್ಟೇಷನ್ ಮಾಸ್ಟರ್ ಸದ್ಯ ತನಿಖೆಯ ಆದೇಶದ ನಂತರ ತಲೆಮರೆಸಿಕೊಂಡಿದ್ದಾನೆ. ಇಂದಿನಿಂದ ಉದ್ಯೋಗ ನೀಡುವ ಮೊದಲು ಹೆಸರನ್ನು ಪರಿಶೀಲಿಸಬೇಕಾಗಿದೆ. ಎಂದು ಮುಸ್ಲಿಮರನ್ನು ಉಲ್ಲೇಖಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಸ್ಟೇಷನ್ ಮಾಸ್ಟರ್ ಷರೀಫನನ್ನು ಹಿಡಿದರೆ ಅಪಘಾತ ಹೇಗೆ ಸಂಭವಿಸಿತು ಎಂದು ತಿಳಿಯುತ್ತದೆ. ಇದು ಅಪಘಾತವೂ ಅಲ್ಲ, ನಿರ್ಲಕ್ಷ್ಯವೂ ಅಲ್ಲ, ತಲೆಮರೆಸಿ ಕೊಂಡಿರುವ ಸ್ಟೇಷನ್ ಮಾಸ್ಟರ್ ಷರೀಫ್ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾನೆ. ಷರೀಫ ಸಿಕ್ಕರೆ ಅವರ ಅಸಲಿ ಮುಖ ಬಯಲಾಗುತ್ತದೆ. ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ಬಾಲಸೋರ್ ರೈಲು ದುರಂತಕ್ಕೆ ಮಸೀದಿ ಮತ್ತು ಶುಕ್ರವಾರದ ನಮಾಜ್ ಕಾರಣ ಎಂಬ ಅರ್ಥದ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲು ದುರಂತದ ಚಿತ್ರವನ್ನು ಅಂತಹ ಪೋಸ್ಟ್ಗಳ ಜತೆಗೆ ಹಂಚಿಕೊಳ್ಳಲಾಗಿದೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರೈಲು ಬೋಗಿಗಳು ಮತ್ತು ರೈಲು ಹಳಿಯ ಸಮೀಪ ಇರುವ ಮಸೀದಿಯನ್ನು ಹೋಲುವ(ಬಿಳಿ ಬಣ್ಣದ) ಕಟ್ಟಡವನ್ನು ಈ ಚಿತ್ರದಲ್ಲಿ ಗುರುತು ಮಾಡಲಾಗಿದೆ. 10 ವರ್ಷಗಳ ಹಿಂದೆಯೂ ಶುಕ್ರವಾರದಂದೇ ಈ ಸ್ಥಳದಲ್ಲಿ ಮಸೀದಿ ಸಮೀಪ ರೈಲು ಅಪಘಾತ ಸಂಭವಿಸಿತ್ತು ಎಂದು ಹಲವರು ಹೇಳಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಷರೀಫ್ ಎಂಬ ಸ್ಟೇಷನ್ ಮಾಸ್ಟ್ರ್ ಎಂಬುವವರು ಈ ಕೃತ್ಯಕ್ಕೆ ಕಾರಣರೇ ಎಂದು ಪರಿಶೀಲು, ಅಪಘಾತ ನಡೆದ ಸುದ್ದಿ ಮಾಡಿದ ಸ್ಥಳಿಯ ಪತ್ರಕರ್ತರ ಸಹಾಯದಿಂದ ಬಹನಗಾ ಬಜಾರ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ನ ಕೋಣೆ ಹೊರಗೆ ಪ್ರದರ್ಶಿಸಲಾಗಿರುವ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಹೆಸರುಗಳ ಚಾರ್ಟ್ನ ಫೋಟೊವನ್ನು ಆಲ್ಟ್ನ್ಯೂಸ್ ಪ್ರಕಟಿಸಿದೆ. ಆ ಪಟ್ಟಿಯಲ್ಲಿ ಷರೀಫ್ ಎಂಬ ಹೆಸರು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ.
ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಜೂನ್ 3 ರಂದು ಪ್ರಕಟವಾದ ಒಡಿಯಾ ಭಾಷೆಯ ಸುದ್ದಿ ಔಟ್ಲೆಟ್ ಕಳಿಂಗ ಟಿವಿಯ ವರದಿಗೆ ಲಭ್ಯವಾಯಿತು. “ಒಡಿಶಾ ರೈಲು ಅಪಘಾತ: ಬಹನಾಗ ಸಹಾಯಕ ಸ್ಟೇಷನ್ ಮಾಸ್ಟರ್ ಪರಾರಿಯಾಗಿದ್ದಾರೆ, ಪ್ರಕರಣ ದಾಖಲಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದೆ. “ವರದಿಗಳ ಪ್ರಕಾರ, ಕರ್ತವ್ಯದಲ್ಲಿದ್ದ ಬಹನಾಗಾ ಸಹಾಯಕ ಸ್ಟೇಷನ್ ಮಾಸ್ಟರ್ ಎಸ್ ಬಿ ಮೊಹಂತಿ ಅವರು ರೈಲು ಅಪಘಾತ ಸಂಭವಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಂತರ ಜೂನ್ 5 ರಂದು ಕಳಿಂಗ ಟಿವಿ “ಒಡಿಶಾ ರೈಲು ಅಪಘಾತ: ಬಹನಾಗಾ ಸ್ಟೇಷನ್ ಮಾಸ್ಟರ್ನ ವಿಚಾರಣೆ ನಡೆಯುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಮತ್ತೊಂದು ವರದಿಯನ್ನು ಪ್ರಕಟಿಸಿತ್ತು. ಜೂನ್ 2 ರಂದು ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಮೊಹಾಂತಿ ಅವರನ್ನು ರೈಲ್ವೆ ಸುರಕ್ಷತಾ ಆಯುಕ್ತರ ತಂಡವು ವಿಚಾರಣೆ ನಡೆಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಡಿಶಾದ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಆಲ್ಟ್ನ್ಯೂಸ್ ಸಂಪರ್ಕಿಸಿದ್ದು, ನಿಲ್ದಾಣದ ಸಿಬ್ಬಂದಿ ಯಾರೂ ತಲೆಮರೆಸಿಕೊಂಡಿಲ್ಲ ಮತ್ತು ಪೊಲೀಸ್ ಇಲಾಖೆ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ಖಚಿತಪಡಿಸಿದರು. ನಿಲ್ದಾಣದ ಸಿಬ್ಬಂದಿಯಲ್ಲಿ ‘ಷರೀಫ್’ ಎಂಬ ಹೆಸರನಲ್ಲಿ ಯಾರೂ ಇಲ್ಲ, ನಿಲ್ದಾಣದ ಎಲ್ಲ ಸಿಬ್ಬಂದಿಗಳ ಮಾಹಿತಿ ಲಭ್ಯವಿದೆ. ಅವರು ವಿವಿಧ ಹಂತಗಳಲ್ಲಿ/ಸ್ಥಳಗಳಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ ಎಂದು ತಿಳಿಸಿದೆ. ಎಸ್ ಬಿ ಮೊಹಂತಿ ತಲೆಮರೆಸಿಕೊಂಡಿಲ್ಲ ಎಂದು ರೈಲ್ವೇ ಪಿಆರ್ಒ ನಿಹಾರ್ ಮೊಹಂತಿ ಕೂಡ ಆಲ್ಟ್ ನ್ಯೂಸ್ಗೆ ಖಚಿತಪಡಿಸಿದ್ದಾರೆ.
ವೈರಲ್ ಫೋಟೊದಲ್ಲಿರುವ ವ್ಯಕ್ತಿ ಯಾರು?
ಹಾಗಿದ್ದರೆ, ವೈರಲ್ ಪೋಸ್ಟ್ನಲ್ಲಿ ಷರೀಫ್ ಎಂದು ಹೇಳಲಾಗುತ್ತಿರುವ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಸರ್ಚ್ ಮಾಡಿದಾಗ, ಫೋಟೊದಲ್ಲಿರುವ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿದೆ. vikaschander.com ಎಂಬ ವೆಬ್ಸೈಟ್ನಲ್ಲಿ ಮಾರ್ಚ್ 2004 ರಂದು ವೆಬ್ಸೈಟ್ನಲ್ಲಿ ಪ್ರಕಟವಾದ ಬ್ಲಾಗ್ ಪೋಸ್ಟ್ನಲ್ಲಿ ಈ ವ್ಯಕ್ತಿಯ ಚಿತ್ರ ಲಭ್ಯವಾಗಿದೆ.
ವಿಕಾಸ್ ಚಂದರ್ ಅವರ ಫೇಸ್ಬುಕ್ ಪ್ರೊಫೈಲ್ ಅನ್ನು ಸರ್ಚ್ ಮಾಡಿದಾಗ ವಿಕಾಸ್ ಚಂದರ್ ಎಂಬುವವರು ಡಿಜಿಟಲ್ ಕ್ರಯೇಟರ್ ಎಂದು ಅಪ್ಡೇಟ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮೇಲಿನ ವೆಬ್ಸೈಟ್ ಲಿಂಕ್ ಅನ್ನು ಸಹ ಲಗತ್ತಿಸಲಾಗಿದೆ. ವೈರಲ್ ಪೋಸ್ಟ್ಗಳಲ್ಲಿ ಫೋಟೋವನ್ನು ಬಳಸಿರುವ ವ್ಯಕ್ತಿಯನ್ನು ಬ್ಲಾಗ್ನಲ್ಲಿ ಬೊರ್ರಾ ಗುಹಾಲು ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಎಂದು ಗುರುತಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಷರೀಫ್ ಎಂಬ ಬಾಲಸೋರ್ ರೈಲ್ವೆ ಸ್ಟೇಷನ್ ಮಾಸ್ಟರ್ ತಲೆಮರೆಸಿಕೊಂಡಿದ್ದಾನೆ ಎಂಬ ಹೇಳಿಕೆಗಳು ಸುಳ್ಳು. ಬಹನಾಗ ಬಜಾರ್ ಸ್ಟೇಷನ್ ಮಾಸ್ಟರ್ ಹೆಸರು ಎಸ್ ಬಿ ಮೊಹಂತಿ. ಅಪಘಾತದ ನಂತರ ಸ್ವಲ್ಪ ಸಮಯದವರೆಗೆ ಮೊಹಾಂತಿ ನಾಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು, ನಂತರದಲ್ಲಿ ಮೊಹಾಂತಿಯವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಖಚಿತಪಡಿಸಿದೆ.
ಭಾರತದಲ್ಲಿನ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾದ ಒಡಿಶಾ ದುರಂತಕ್ಕೆ ಸಂಬಂಧಿಸಿದಂತೆ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಜೂನ್ 4 ರಂದು ಒಡಿಶಾ ಪೊಲೀಸರು ಟ್ವೀಟ್ನಲ್ಲಿ, ವದಂತಿಗಳನ್ನು ಹರಡುವ ಮೂಲಕ ಕೋಮು ಸೌಹಾರ್ದತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.