ಪಿಟಿಸಿಲ್ ಭೂಮಿ ವಾಣಿಜ್ಯ ಭೂ ಪರಿವರ್ತನೆಗೆ ದಸಂಸ ಐಕ್ಯ ಹೋರಾಟ ಸಮಿತಿ ಮನವಿ
ಉಡುಪಿ: ಕರ್ನಾಟಕ ಸರಕಾರದ ಗ್ರಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಗ್ರಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರನ್ನು ಉಡುಪಿಯ ಪ್ರವಾಸಿ ಬಂಗಲೆಯಲ್ಲಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಮಂಜುನಾಥ್ ಗಿಳಿಯಾರು ಅವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯು ಭೇಟಿಯಾಗಿ ನೀಡಿ ಅಭಿನಂಧಿಸಲಾಯಿತು.
ಅಂತೆಯೇ ಉಡುಪಿ ದಲಿತರ ಪ್ರಮುಖ ಸಮಸ್ಯೆಗಳಾದ ಪರಿಶಿಷ್ಟರಿಗೆ ಮಂಜೂರಾದ ಪಿಟಿಸಿಲ್ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಮಿ ಪರಿವರ್ತನೆ ಮಾಡಲು ಕ್ರಮಕೈಗೊಳ್ಳುವಂತೆ ಮನವಿಮಾಡಲಾಯಿತು.ಮತ್ತು ಪಿಟಿಸಿಲ್ ಭೂಮಿ ಪರಭಾರೆ ನಿಷೇಧ ಇರುವುದರಿಂದ ಮನೆ ಕಟ್ಟಲು ವಾಣಿಜ್ಯ ಬ್ಯಾಂಕ್ ಗಳು ಸಾಲ ಕೊಡಲು ನಿರಾಕರಿಸುವ ಬಗ್ಗೆಯೂ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಅಷ್ಟೇ ಅಲ್ಲದೇ ಎಲ್ಲಾ ಪೋಲಿಸ್ ಸ್ಟೇಷನ್ಗಳಲ್ಲಿ ಪರಿಶಿಷ್ಟ ದೌರ್ಜನ್ಯ ತಡೆ ಕಾಯಿದೆ ಅನ್ವಯ ಕೇಸು ದಾಖಲಾದಾಗ ಸ್ವತಃ ಠಾಣಾಧಿಕಾರಿಯವರೇ ಮುತುವರ್ಜಿ ವಹಿಸಿ ಪೋಲೀಸ್ ಸ್ಟೇಷನ್ ನಿಂದಲೇ ಕೌಂಟರ್ ಕೇಸು ದಾಖಲಿಸುತ್ತಿರುವ ಬಗ್ಗೆಯು ಚರ್ಚೆ ನಡೆಸಿ ಮನದಟ್ಟು ಮಾಡಲಾಯಿತು.
ಗೃಹ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ದ.ಸಂ.ಸ.ಐಕ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ಟರ್, ಶ್ಯಾಮರಾಜ್ ಬಿರ್ತಿ,ವಾಸುದೇವ ಮುಧೂರು, ವಿಶ್ವನಾಥ ಬೆಳ್ಳಂಪಳ್ಳಿ ಪರಮೇಶ್ವರ ಉಪ್ಪೂರು, ರಮೇಶ್ ಕೆಳಾರ್ಕಳಬೆಟ್ಟು, ಆನಂದ ಬ್ರಹ್ಮಾವರ, ಜಿಲ್ಲಾ ಪದಾಧಿಕಾರಿಗಳಾದ ಸಂಜೀವ ಬಳ್ಕೂರು, ಸುರೇಶ ಹಕ್ಲಾಡಿ, ಮಂಜುನಾಥ ಬಾಳ್ಕುದ್ರು, ಅರುಣ್ ಪಾಡಿಗಾರ, ಶಿವಾನಂದ ಬಿರ್ತಿ ಇದ್ದರು.