ಕಾಂಗ್ರೆಸ್ ಮತದಾರರನ್ನು ವಂಚಿಸಿರುವುದು ಸಾಬೀತು: ಶಾಸಕ ಕಾಮತ್

ಮಂಗಳೂರು: ಗ್ಯಾರಂಟಿ ಘೋಷಣೆ ಚೀಪ್ ಪಾಪ್ಯುಲಾರಿಟಿ ಎಂದು ಸ್ವತಃ ಕಾಂಗ್ರೆಸ್ ಮುಖಂಡ, ಕೃಷಿ ಸಚಿವ ಚೆಲುವರಾಯಸ್ವಾಮಿಯೇ ಹೇಳಿರುವುದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತದಾರರಿಗೆ ವಂಚಿಸಿರುವುದು ಸಾಬೀತಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

”ಚುನಾವಣೆಯ ಸಂದರ್ಭ ಗೆಲುವೇ ಅನಿವಾರ್ಯ. ಫಲಿತಾಂಶಕ್ಕಾಗಿ ಇವೆಲ್ಲವನ್ನೂ ಮಾಡಬೇಕು. ಇಲ್ಲದ್ದು, ಬಲ್ಲದ್ದು ಎಲ್ಲವನ್ನೂ ಮಾಡಬೇಕು. ಕೆಲವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕು”… ಎಂದು ಹೇಳುವ ಮೂಲಕ ಕಾಂಗ್ರೆಸ್ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಅಧಿಕಾರ ಹಿಡಿಯುವ ಒಂದೇ ಉದ್ದೇಶದಿಂದ ಮತದಾರರನ್ನು ವಂಚಿಸಿರುವುದು ಸ್ವತಃ ಸಚಿವರ ಹೇಳಿಕೆಯಿಂದ ಬಹಿರಂಗವಾಗಿದೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಕಾಮತ್ ಆಗ್ರಹಿಸಿದ್ದಾರೆ.

ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಯಾವುದೇ ಲೆಕ್ಕಾಚಾರ ಹಾಕದೆ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಈಗ ಇದನ್ನು ಜಾರಿಗೆ ತರಲು ಸರಕಾರ ಪರದಾಡುತ್ತಿದೆ. ಗ್ಯಾರಂಟಿ ಘೋಷಣೆ ಚುನಾವಣೆ ಗಿಮಿಕ್ ಎಂದು ಸಚಿವರೇ ಹೇಳಿರುವುದು ಪುಕ್ಕಟೆ ವಿಚಾರದಲ್ಲಿ ಕಾಂಗ್ರೆಸ್ ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು.

ಮುಂದೆಯೂ ಚುನಾವಣೆ ಸಂದರ್ಭ ಕಾಂಗ್ರೆಸ್ ಅಧಿಕಾರಕ್ಕಾಗಿ ನಾನಾ ಘೋಷಣೆಗಳ ಮೂಲಕ ಮತದಾರರನ್ನು ವಂಚಿಸುವ ಪ್ರಯತ್ನ ಮಾಡಲಿದೆ. ಈ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

1 thought on “ಕಾಂಗ್ರೆಸ್ ಮತದಾರರನ್ನು ವಂಚಿಸಿರುವುದು ಸಾಬೀತು: ಶಾಸಕ ಕಾಮತ್

  1. Sir greetings, Hon Prime minister told he will remove corruption from India. But go to any govt office no body can get any work done with out corruption.
    Introduce E currency for the payment above 101.
    That’s it.
    Everyone promises. But not completing the promises.

Leave a Reply

Your email address will not be published. Required fields are marked *

error: Content is protected !!