ವ್ಯವಹಾರದಲ್ಲಿ ನಷ್ಟ- ಫ್ಯಾಕ್ಟರಿಯಲ್ಲಿಯೇ ಉದ್ಯಮಿ ಆತ್ಮಹತ್ಯೆ
ಕಾರ್ಕಳ: ಅಜೆಕಾರು ಸಮೀಪದ ಹೆರ್ಮುಂಡೆ ಎಂಬಲ್ಲಿ ವ್ಯವಹಾರದಲ್ಲಿನ ನಷ್ಟದಿಂದ ಮಾನಸಿಕವಾಗಿ ನೊಂದ ಉದ್ಯಮಿಯೊಬ್ಬರು ಫ್ಯಾಕ್ಟರಿಯಲ್ಲಿಯೇ ನೇಣಿಗೆ ಶರಣಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತ ಉದ್ಯಮಿ ಅಜೆಕಾರು ಮುಖ್ಯ ರಸ್ತೆಯ ನಿವಾಸಿ ನಕುಲದಾಸ್ ಪೈ (51) ಎಂದು ತಿಳಿದು ಬಂದಿದೆ.
ಇವರು ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ನೊಂದು ಹೆರ್ಮುಂಡೆಯಲ್ಲಿರುವ ಫ್ಯಾಕ್ಟರಿಯ ಹಿಂಬದಿ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್ಎಸ್ಆರ್ ಸೆಕ್ಟರ್- 4, ಬೆಂಗಳೂರು.