ಸುಳ್ಯ: ಯುವ ವೈದ್ಯೆ ನೇಣಿಗೆ ಶರಣು

ಸುಳ್ಯ: ಇಲ್ಲಿನ ತಾಲೂಕು ಆಸ್ಪತ್ರೆಗೆ ನೇಮಕಗೊಂಡಿದ್ದ ಯುವ ವೈದ್ಯೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ನೀರ್ಚಾಲಿನಲ್ಲಿ ನಡೆದಿದೆ. ಕನ್ಯಪ್ಪಾಡಿ ನಿವಾಸಿ ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಗೋಪಾಲಕೃಷ್ಣ ಭಟ್ ಅವರ ಪುತ್ರಿ ಯುವ ವೈದ್ಯೆ ಡಾ. ಪಲ್ಲವಿ ಜಿ.ಕೆ. (25) ಆತ್ಮಹತ್ಯೆಗೆ ಶರಣಾದವರು.

ಜೂ. 5ರಂದು ರಾತ್ರಿ ಊಟ ಮಾಡಿ ನಿದ್ದೆ ಮಾಡಿದ್ದ ಪಲ್ಲವಿ ಮರುದಿನ ಬೆಳಗ್ಗೆ ಎದ್ದಿರಲಿಲ್ಲ. ಮನೆಯವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿತ್ತು.

ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್‌ ಪೂರ್ತಿಗೊಳಿಸಿದ ಬಳಿಕ ಪಲ್ಲವಿ ಗ್ರಾಮೀಣ ಸೇವೆಗಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದರು. ಬಳಿಕ ಎಂ.ಡಿ. ಕೋರ್ಸ್‌ನ ಪರೀಕ್ಷೆ ಬರೆಯಲು ಅಲ್ಲಿಂದ ರಜೆಯಲ್ಲಿ ತೆರಳಿದ್ದರು. ಪರೀಕ್ಷೆಯ ಬಳಿಕ ಮನೆಗೆ ಬಂದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬದಿಯಡ್ಕ ಪೊಲೀಸರು ಮೃತದೇಹದ ಮಹಜರು ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!