ತೆರಿಗೆ ಹೆಸರಿನಲ್ಲಿ ಪ್ರತಿಷ್ಠಿತ ಸಂಸ್ಥೆಯಿಂದ ಲಕ್ಷಾಂತರ ‌ರೂ ಪಡೆದ ಬಿಜೆಪಿ ಪುರಸಭಾ ಸದಸ್ಯರು

ಕಾರ್ಕಳ: ಪುರಸಭಾ ವ್ಯಾಪ್ತಿಯ ಒಂದು ಸಂಸ್ಥೆಯ ಕಟ್ಟಡಗಳಿಗೆ ತೆರಿಗೆ ನಿಗದಿ ಮಾಡಲು‌ ಬಿಜೆಪಿ ಪುರಸಭಾ ಸದಸ್ಯರು ಲಕ್ಷಾಂತರ ರೂಪಾಯಿ ಹಣ ಪಡೆದು ಭ್ರಷ್ಟಾಚಾರದ ಜೊತೆಗೆ ಪುರಸಭೆಗೆ ದ್ರೋಹ ಎಸಗಿದ್ದಾರೆ, ಶಾಸಕರು ನೈತಿಕತೆ ಇದ್ದರೆ ಅಂತಹ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಿ, ಸಂಸ್ಥೆಗೆ ಹಣ ಹಿಂತಿರುಗಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಪುರಸಭಾ ‌ಸದಸ್ಯ ಹಾಗೂ ಕಾಂಗ್ರೇಸ್ ‌ವಕ್ತಾರ ಶುಭದರಾವ್ ‌ಆಗ್ರಹಿಸಿದ್ದಾರೆ

ಒಂದು ಸಂಸ್ಥೆಯ ಕಟ್ಟಡಕ್ಕೆ ತೆರಿಗೆ ಕಟ್ಟುವ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ರೂ 10 ಲಕ್ಷ ಪಡೆದು ಪುರಸಭೆಗೆ ಕೇವಲ 4,25,671/ ತೆರಿಗೆ ಕಟ್ಟಿ ಪುರಸಭೆಗೆ ಮತ್ತು ಸಂಸ್ಥೆಗೆ ದ್ರೋಹ ಮಾಡಲಾಗಿದೆ, ಈ ಪ್ರಕರಣವು ಪುರಸಭೆಯ ದಾಖಲೆಗಳಿಂದ ಬಹಿರಂಗವಾಗಿದ್ದು ಆ ದಾಖಲೆಯನ್ನು ಶಾಸಕರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುವುದು ಸ್ವತಃ ಅವರೇ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ನೈತಿಕತೆ ಉಳಿಸಿಕೊಳ್ಳಲಿ ಎಂದು ಆಗ್ರಹಿಸುತ್ತೇನೆ.

ತಮ್ಮ ವಿಜಯೋತ್ಸವದ ಸಭೆಯಲ್ಲಿ ಪುರಸಭೆಯ ಲೈಸೆನ್ಸ್ ಗಾಗಿ ಇನ್ನೂರು ಮುನ್ನೂರು ರೂಪಾಯಿಗೆ ಕೈ ಚಾಚುವ ಚಿಲ್ಲರೆ ನಾಯಕ ಎಂದು ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿ ಅಪಮಾನ ಮಾಡಿದ್ದೀರಿ. ಇಂದು ನಿಮ್ಮದೇ ಪಕ್ಷದ ಸದಸ್ಯರ ಚಿಲ್ಲರೆ ಕೆಲಸವನ್ನು ದಾಖಲೆ ಸಹಿತ ಬಹಿರಂಗ ಪಡಿಸಿದ್ದೇನೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಇಲ್ಲವಾದರೆ ಕ್ಷೇತ್ರದ ಜನತೆ ನಿಮ್ಮನ್ನೆ ಚಿಲ್ಲರೆ ನಾಯಕ ಎಂದು ತಿಳಿದುಕೊಳ್ಳುವರು ಎಂದು ಸವಾಲು ಹಾಕಿದ್ದಾರೆ.

2 thoughts on “ತೆರಿಗೆ ಹೆಸರಿನಲ್ಲಿ ಪ್ರತಿಷ್ಠಿತ ಸಂಸ್ಥೆಯಿಂದ ಲಕ್ಷಾಂತರ ‌ರೂ ಪಡೆದ ಬಿಜೆಪಿ ಪುರಸಭಾ ಸದಸ್ಯರು

  1. All the political parties are corrupt irrespective of which political party they belong

Leave a Reply

Your email address will not be published. Required fields are marked *

error: Content is protected !!