ಉಡುಪಿ: ಚೈತನ್ಯ ಫೌಂಡೇಶನ್- ವಿಶ್ವ ಪರಿಸರ ದಿನ ಆಚರಣೆ
ಉಡುಪಿ: ಕಡೆಕಾರು ಚೈತನ್ಯ ಸೊಶಿಯಲ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಅಂಬಲಪಾಡಿ ಅಂಗನವಾಡಿ ಮಕ್ಕಳಿಗೆ ಹೂವಿನ ಗಿಡಗಳನ್ನು ವಿತರಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನೀ.ಬೀ ವಿಜಯ ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಹೂವಿನ ಗಿಡಗಳನ್ನು ನೀಡಿ ಪರಿಸರ ಪ್ರೇಮವನ್ನು ಬೆಳೆಸುವ ಕಾರ್ಯ ಶ್ಲಾಘನೀಯ, ಮಕ್ಕಳು ಹೂವಿನ ಗಿಡವನ್ನು ನೆಟ್ಟು ಬೆಳೆಸಿ ಹೂವನ್ನು ಗಿಡದಿಂದ ಕೀಳದೆ ಹೂವಿನ ಅಂದವನ್ನು ಆನಂದಿಸಬೇಕು ಎಂದರು.
ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್, ಜತಿನ್ ಕಡೆಕಾರ್ ಉಪಸ್ಥಿತರಿದ್ದರು. ಚೈತನ್ಯ ಫೌಂಡೇಶನ್ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿ ವಂದಿಸಿದರು.