ಬಾರ್ ಕ್ಯಾಶಿಯರ್‌ನನ್ನು ಡ್ರ್ಯಾಗರ್‌ನಿಂದ ಚುಚ್ಚಿ ಕೊಲೆ
ಕ್ಷುಲಕ ವಿಚಾರಕ್ಕೆ ಬಾರ್ ಕ್ಯಾಶಿಯರ್‌ಗೆ ಡ್ರ್ಯಾಗರ್‌ನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಕಳೆದ ರಾತ್ರಿ ಶಿವಮೊಗ್ಗ ನಗರದ ಬಾರ್‌ವೊಂದರಲ್ಲಿ ನಡೆದಿದೆ.
ಬಾರ್ ಕ್ಯಾಶಿಯರ್ ಸಚಿನ್ (27) ಕೊಲೆಯಾದ ದುರ್ದೈವಿ.
ಬಾರ್ ಬಂದ್ ಮಾಡುವ ಸಮಯವಾದರು ಆಯನೂರು ತಾಂಡಾದ ಮೂವರು ಮದ್ಯ ಸೇವಿಸುತ್ತಿದ್ದರು. ಬಾರ್ ಸಿಬ್ಬಂದಿ ಸಮಯವಾಗಿದೆ ಎಂದು ತಿಳಿಸಿದ್ದು, ಆದರೆ ತಮಗೆ ಇನ್ನೂ ಮದ್ಯ ಸೇವಿಸಬೇಕಿದೆ ನಾವು ಹೋಗುವುದಿಲ್ಲ ಎಂದು ಅಬ್ಬರಿಸಿದ್ದಾರೆ.
ಆಗ ಬಾರ್‌ನ ಸಹಾಯಕ ಕ್ಯಾಶಿಯರ್ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರುತ್ತಿದ್ದಂತೆ ಕ್ಯಾಶಿಯರ್ ಸಚಿನ್ ವಿರುದ್ಧ ಮೂವರು ಯುವಕರು ಕೋಪಗೊಂಡು ಹಲ್ಲೆ ನಡೆಸಿದ್ದಾರೆ.
ಓರ್ವ ಯುವಕ ಬಿಯರ್ ಬಾಟಲಿಯನ್ನು ತನ್ನ ತಲೆಗೆ ಹೊಡದುಕೊಂಡು ಬಾರ್ ಸಿಬ್ಬಂದಿಗೆ ಚುಚ್ಚಲು ಬಂದಿದ್ದಾನೆ ಎಂದು ದೂರಿದ್ದಾರೆ. ಈ ವೇಳೆ ಸಹಾಯಕ ಕ್ಯಾಶಿಯರ್ ಅರುಣ್ ಕುಮಾರ್ ಕೈಗೆ ಗಾಯವಾಗಿದೆ.
ಇದೇ ವೇಳೆ ಮತ್ತೋರ್ವ ಯುವಕ ತನ್ನ ಬಳಿ ಇದ್ದ ಡ್ರ್ಯಾಗರ್ ತೆಗೆದು ಕ್ಯಾಶಿಯರ್ ಸಚಿನ್ ಎದೆಯ ಬಲಭಾಗಕ್ಕೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಸಚಿನ್‌ನನ್ನು ಬಾರ್ ಸಿಬ್ಬಂದಿ ತಕ್ಷಣ ಆಯನೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ 108 ಆಂಬುಲೆನ್ಸ್‌ನಲ್ಲಿ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಸಚಿನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕುಂಸಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.