ಕಾಪು: ಅಪಘಾತದಲ್ಲಿ ಮೃತಪಟ್ಟ ಮಂಗ- ಭಜರಂಗದಳದಿಂದ ಅಂತ್ಯಸಂಸ್ಕಾರ
ಕಾಪು: ರಾಷ್ಟೀಯ ಹೆದ್ದಾರಿ 66ರ ಮೂಳೂರು ನಾರಾಯಣ ಗುರು ರಸ್ತೆ ಬಳಿ ರಸ್ತೆ ಅಪಘಾತದಲ್ಲಿ ಅಸುನೀಗಿದ ಮಂಗವೊಂದನ್ನು ಭಜರಂಗದಳ ಹಾಗೂ ವಿಶ್ವ ಹಿಂದು ಪರಿಷದ್ ಕಾರ್ಯಕರ್ತರು ಭಕ್ತಿ ಶ್ರದ್ಧಾ ಪೂರ್ವಕ ಅಂತಿಮ ಸಂಸ್ಕಾರ ನಡೆಸಿದ ಘಟನೆಯು ಉಚ್ಚಿಲದಲ್ಲಿ ಶನಿವಾರ ನಡೆದಿದೆ.
ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಷ್ಟೀಯ ಹೆದ್ದಾರಿ 66ರಲ್ಲಿ ಕಾರೊಂದು ಡಿಕ್ಕಿ ಹೊಡೆದು ವಾನರ ಗಾಯಗೊಂಡಿತ್ತು. ಕೂಡಲೇ ಕಾರ್ಯಕರ್ತರು ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ನಡುವೆ ಅಸುನೀಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಸಾವನ್ನು ಧೃಡಪಡಿಸಿದ್ದರು.
ಬಳಿಕ ಪುರೋಹಿತರ ಮಾರ್ಗದರ್ಶನದಂತೆ ಸಂಘಟನೆಯ ಕಾರ್ಯಕರ್ತರಾದ ಮಹೇಶ್, ಸಂದೀಪ್, ವಿಶು, ಮನೋಜ್ ಸೇರಿಕೊಂಡು ಅಂತ್ಯಸಂಸ್ಕಾರವನ್ನು ವಿಧಿವಿದಾನದ ಮೂಲಕ ನೆರವೆರಿಸಿದ್ದು, ಅಂತಿಮ ಪೂಜೆ ಪುರಸ್ಕಾರ ನಡೆಸಿದ್ದಾರೆ.