‘ರೆಡ್ ಅಲರ್ಟ್’ ಘೋಷಣೆಯಾಗಿದ್ದರೂ ಅಲರ್ಟ್ ಆಗದ ಜಿಲ್ಲಾಡಳಿತ ವಿರುದ್ದ ಜನರ ಆಕ್ರೋಶ

ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದರೂ, ಇದಕ್ಕಾಗಿ ಸಜ್ಜುಗೊಳ್ಳದ ಜಿಲ್ಲಾಡಳಿತ ವೈಫಲ್ಯ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ವಿಪರೀತ ಮಳೆ ಬಗ್ಗೆ ಸೆ. 18 ರಂದು ಹವಾಮಾನ ಇಲಾಖೆ ಎಚ್ಚರಿಸಿತ್ತು, ಕೇಂದ್ರದ ಎನ್ ಡಿ ಆರ್ ಎಫ್ ತಂಡ ಕರೆಸುವ ಬಗ್ಗೆಯೂ ಯಾವುದೇ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆರೆ ಬರುವ ತಗ್ಗು ಪ್ರದೇಶಗಳ ಜನರ ಸುರಕ್ಷತೆಯ ದೃಷ್ಠಿಯಿಂದ ಸ್ಥಳಂತರಕ್ಕೆ ಯಾವುದೇ ಬೋಟ್ ಗಳನ್ನು ಸನ್ನದ್ದು ರೀತಿಯಲ್ಲಿ ತರಿಸಿ ಇಡದಿರುವುದು ಇವರ ವೈಫಲ್ಯವನ್ನು ಎತ್ತಿತೋರಿಸುತ್ತದೆ.

ಹಳೆಕಾಲದ ಬೋಟ್‌ಗಳಲ್ಲಿ ಜನರನ್ನು ಸುಕ್ಷಿತ ಸ್ಥಳಗಳಿಗೆ ರವಾನಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ನಗರ ಠಾಣಾ ಪೊಲೀಸರ ಸಕಾಲಿಕ ಕ್ರಮಕ್ಕೆ ಬನ್ನಂಜೆ, ಕಲ್ಸಂಕ, ಬೈಲಕೆರೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೆರೆ ಬರುವ ಪ್ರದೇಶಗಳ ಜನರ ಸ್ಥಳಂತರ ಮಾಡುವ ಬಗ್ಗೆಯಾಗಲಿ, ಗಂಜಿ ಕೇಂದ್ರ ಸ್ಥಾಪನೆ ಮಾಡುವಲ್ಲೂ ಆಸಕ್ತಿ ತೋರದ ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಜನತೆಗೆ ಆಪತ್ತು ಬಂದರೆ ಪಕ್ಷಾತಿತವಾಗಿ ಕೆಲಸ ಮಾಡುವ ಜನಪ್ರತಿನಿಧಿಗಳು: ಜಿಲ್ಲೆಯಲ್ಲಿ ಯಾವುದೇ ಪ್ರಕೃತಿ ವಿಕೋಪವಿರಲಿ, ಅತೀ ವೃಷ್ಠಿ, ಅನಾವೃಷ್ಠಿ ಬರಲಿ ಉಡುಪಿ ಜಿಲ್ಲೆಯ ರಾಜಕೀಯ ನಾಯಕರು ಪಕ್ಷ ಭೇಧ ಮರೆತು ಜನರಿಗೆ ಸಹಾಯ ಮಾಡುತ್ತಾರೆ, ಆದರೆ ದಪ್ಪ ಚರ್ಮದ ಅಧಿಕಾರಿ ವರ್ಗ ಮಾತ್ರ ಇದೆಲ್ಲದರ ಪರಿವೇ ಇಲ್ಲದಂತೆ ವರ್ತಿಸುತ್ತಾರೆ.

ಜಿಲ್ಲೆಯ ಜನರ ಮೌನವನ್ನು ಮುಗ್ದತೆಂದು ಭಾವಿಸುವ ರಾಜಕಾರಣಿಗಳಿಗೆ ಇದು ಎಚ್ಚರಿಕೆಯ ಘಂಟೆಯಾಗಬೇಕು: ಯಾಕೆಂದರೆ ಎಲ್ಲಾ ರಾಜಕೀಯಾ ಪಕ್ಷದವರು ಉಡುಪಿ ಜಿಲ್ಲೆಗೆ ಉಸ್ತುವಾರಿ ನೇಮಕ ಮಾಡುವಲ್ಲಿ ಪ್ರತಿಬಾರಿ ಅನ್ಯಾವೆಸಗುತ್ತಾರೆ, ಜಿಲ್ಲೆಯ ಶಾಸಕರಿಗೆ ಜಿಲ್ಲೆಯ ಉಸ್ತುವಾರಿ ನೀಡಿ ಸ್ಥಳೀಯ ಸಮಸ್ಯೆಗಳಿಗೆ ಶ್ರೀಘ್ರ ಪರಿಹಾರ ಒದಗಿಸಿಕೊಡುಬೇಕಾದ ರಾಜಕೀಯ ನಾಯಕರು ಬೇರೆ ಜಿಲ್ಲೆಯವರನ್ನು ಉಸ್ತುವಾರಿ ನೇಮಿಸಿ ಸ್ಥಳೀಯ ಸಮಸ್ಯೆಗಳನ್ನು ಜೀವಂತವಾಗಿರಲು ಕಾರಣರಾಗುತ್ತಾರೆ.


ಇಂತಹ ಸಮಸ್ಯೆಗಳು ಎದುರದಾಗ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಉಸ್ತುವಾರಿಯೇ ಇಲ್ಲದ ಜಿಲ್ಲೆಯ ಜನರ ಕೂಗು ಕೇಳುವವರು ಯಾರು, ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸುವವರು ಯಾರೆಂದು ಜನರು ಪ್ರಶ್ನಿಸತೊಡಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!