Hi -TECH DHOTI ಖ್ಯಾತಿಯ ಎಚ್.ಎಮ್ ಬಾಲಸುಬ್ರಹ್ಮಣ್ಯರಿಂದ ಮತ್ತೊಂದು ಅವಿಷ್ಕಾರ
ರೈತರಿಗೆ ಅತೀ ಉಪಯುಕ್ತವಾದ ಕಳೆ ಹುಲ್ಲು ಕಟಾವು ಮಾಡುವ ಮಲ್ಟಿ ಹೆಡ್ ಗ್ರಾಸ್ ಕಟರ್ ಯಂತ್ರವನ್ನು ಹಾಸನದ ಬಾಲಸುಬ್ರಹ್ಮಣ್ಯ ಹೆಚ್.ಎಮ್, Innomech Technologies Malleshwaram, Bangalore ಇವರು ಕರ್ನಾಟಕದಲ್ಲೇ ವಿಶೇಷವಾದ ಆವಿಷ್ಕಾರ ಮಾಡಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ್ದಾರೆ.
ಯುಎಸ್ಎ ಯಲ್ಲಿ ಕಾರ್ ಡಿಸೈನರ್ ಆಗಿ 13 ವರ್ಷ ಸೇವೆ ಸಲ್ಲಿಸಿ ವಿಶ್ವವಿಖ್ಯಾತರಾದ ಹಾಸನ ಜಿಲ್ಲೆಯ ಅರಕಲಗೂಡಿನ ಬಾಲಸುಬ್ರಹ್ಮಣ್ಯ ಹೆಚ್ ಎಮ್ ಅವರ ಕಾರಿನ ಹೊಸಹೊಸ ಅವಿಷ್ಕಾರಗಳನ್ನು ವಿಶ್ವದ 8 ದೇಶಗಳ ಪ್ರತಿಷ್ಠಿತ ಅತ್ಯಾಧುನಿಕ ಕಾರು ತಯಾರಿಕ ಸಂಸ್ಥೆಗಳು ಬಳಸುತ್ತಿದೆ. ಯುಎಸ್ಎಯಲ್ಲಿದ್ದರೂ ತಮ್ಮ ತಾಯ್ನಡಿಗೆ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಲ್ಲಿದ್ದ ಬಾಲಸುಬ್ರಹ್ಮಣ್ಯ ಹೆಚ್ ಎಮ್ ತನ್ನ ತಂದೆಯ ಅಕಾಲಿಕ ನಿಧನದ ಬಳಿಕ ತಂದೆ ಮಾಡಿ ಕೃಷಿಯನ್ನು ನೋಡಿಕೊಳ್ಳುವ ಜವಾಬ್ಧಾರಿಯಿಂದ ಊರಿನಲ್ಲೇ ಉಳಿಯ ಬೇಕಾಗಿ ಬಂತು. ಕೃಷಿ ಕ್ಷೇತ್ರದಲ್ಲಿ ದುಡಿಯುವ ಹೊತ್ತಿಗೆ ಕೃಷಿ ಕ್ಷೇತ್ರಕ್ಕೂ ಒಂದು ಅತ್ಯುತ್ತಮವಾದ ಕೊಡುಗೆಯನ್ನು ರೈತರು ಸೇರಿ ಜನಮೆಚ್ಚುವ ರೀತಿಯಲ್ಲಿ ಅವಿಷ್ಕಾರ ಮಾಡುವ ಕನಸು ಹೊತ್ತು ಮುನ್ನಡೆದರು ಬಾಲಸುಬ್ರಹ್ಮಣ್ಯ ಹೆಚ್ ಎಮ್. ಅಡಿಕೆ ಕೃಷಿಕರ ಅನುಕೂಲಕ್ಕೆ ಸರಿಯಾಗಿ ಹೈಟೆಕ್ ದೋಟಿಯನ್ನು ಅವಿಷ್ಕಾರ ಮಾಡಿ ಜನಮನಗೆದ್ದರು.
ಬಾಲಸುಬ್ರಹ್ಮಣ್ಯ ಹೆಚ್ ಎಮ್ ಅವರ ಅಡಿಕೆ ಬೆಳೆಗಾರರ ಆಶಾಕಿರಣವಾದ ಹೈಟೆಕ್ ದೋಟಿಯನ್ನು ಪ್ರಗತಿಬಂಧು ಯೋಜನೆಯ ರೂವಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಂಡು ಅತ್ಯಂತ ಖುಷಿಪಟ್ಟು 5 ಹೈಟೆಕ್ ದೋಟಿಯನ್ನು ಖರೀದಿಸಿದರು. ಬಾಲಸುಬ್ರಹ್ಮಣ್ಯ ಹೆಚ್ ಎಮ್ ಹೈಟೆಕ್ ದೋಟಿ ವಿಶ್ವದ ಮನ್ನಣೆಗಳಿಸಿತು. ದೇಶದಲ್ಲಿ ಇಂತಹ ಮೊದಲ ಅವಿಷ್ಕಾರ ಎಂಬ ಹೆಗ್ಗಳಿಕೆಯೂ ಬಂತು. ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ದೋಟಿಗಳು ಮಾರಾಟವಾದವು.
ಹೈಟೆಕ್ ದೋಟಿಯಿಂದ ಅಡಿಕೆ ಬೆಳೆಗಾರರಿಗೆ ಅತೀ ಹೆಚ್ಚಿನ ಪ್ರಯೋಜನವಾಯಿತು. ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುವಾಗ ಆಗುವ ಸಾವು ನೋವುಗಳು ಕೂಡ ತಪ್ಪಿ ಅಡಿಕೆ ಬೆಳೆಗಾರರಿಗೆ ವರದಾನವಾಯಿತು.
ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಹೆಚ್ ಎಮ್ ಮತ್ತೊಂದು ಅವಿಷ್ಕಾರ :
ಹೊಸ ಹೊಸ ಅವಿಷ್ಕಾರಗಳ ಮೂಲಕ ಅನುಕೂಲ ಮಾಡಬೇಕು ಎನ್ನುವ ಪರಿಕಲ್ಪನೆಯಿಂದ ಈಗ ವಿಶ್ವದಲ್ಲೇ ಹೊಸ ಅವಿಷ್ಕಾರವನ್ನು ಬಳಸಿಕೊಂಡು ಮಲ್ಟಿ ಹೆಡ್ ಗ್ರಾಸ್ ಕಟರ್ ಹುಲ್ಲು ಕೀಳುವ ಯಂತ್ರವನ್ನು ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಹೆಚ್ ಎಮ್ ತಯಾರಿಸಿ ಹೊಸ ಸಾಧನೆಯನ್ನು ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಒಬ್ಬ ಭಾರತೀಯ ಯುವಕ ವಿಶ್ವಮಟ್ಟದ ಅವಿಷ್ಕಾರ ಮಾಡಿರುವುದು ದೇಶಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ವಿಶ್ವದ ಎಲ್ಲ ಸಂಸೋಧನೆಗಳನ್ನು ಚೀನಾದಲ್ಲಿ ತಯಾರಾಗಿ ಭಾರತಕ್ಕೆ ದೊರೆಯುತ್ತಿದ್ದವು. ಬಾಲಸುಬ್ರಹ್ಮಣ್ಯ ಹೆಚ್ ಎಮ್ ಅವರ ಅವಿಷ್ಕಾರವನ್ನು ಕರ್ನಾಟಕದಲ್ಲೇ ಸಂಶೋಧನೆ ಮಾಡಿ ವಿಶ್ವಕ್ಕೆ ಪರಿಚಯಿಸುತ್ತಿದೆ.
ಈ ಹಿಂದೆ ಸಿಂಗಲ್ ಬ್ರಶ್ ಗ್ರಾಸ್ ಕಟರ್ ಇತ್ತು. ಇದರಿಂದ ಹುಲ್ಲು ಕಳೆ ಕಟಾವು ಮಾಡುವುದು ಹಲವು ದಿನಗಳ ಕೆಲಸವಾಗುತ್ತಿತ್ತು. ಇದೀಗ ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಹೆಚ್ ಎಮ್ ಅವರು ಹೊಸತಾಗಿ ಅವಿಷ್ಕಾರ ಮಾಡಿದ ಮಲ್ಟಿ ಹೆಡ್ ಗ್ರಾಸ್ ಕಟರ್ ನಿಂದ 3 ದಿನ ಮಾಡುವ ಕೆಲಸವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಬಹುದು. ಆಧುನಿಕತೆಯನ್ನು ಬಳಸಿಕೊಂಡು ಡಬಲ್ ಹೆಡ್ ಹೆಡ್ ಗ್ರಾಸ್ ಕಟರ್ ಮತ್ತು ತ್ರಿಬಲ್ ಹೆಡ್ ಗ್ರಾಸ್ ಕಟರ್ ಅನ್ನು ತಯಾರಿಸಲಾಗಿದೆ.
ಸಿಂಗಲ್ ಹೆಡ್ ಗ್ರಾಸ್ ಕಟರ್ ಅನ್ನು ಹೆಗಲ ಮೇಲೆ ಹಾಕಿಕೊಂಡು ಹುಲ್ಲು ಕಟಾವು ಮಾಡುವ ಬದಲಿಗೆ ಕೆಲಸ ಮಾಡುವಾಗ ಹೆಚ್ಚು ತ್ರಾಸವಿಲ್ಲದೆ ಅತೀ ಸುಲಭದಲ್ಲಿ ಹುಲ್ಲು ಕಟಾವು ಮಾಡಬಹುದು. ತ್ರಿಬಲ್ ಹೆಡ್ ಗ್ರಾಸ್ ಕಟರ್ 3 ಅಡಿಯಷ್ಟು ಜಾಗದ ಹುಲ್ಲನ್ನು ಕಟಾವು ಮಾಡುತ್ತದೆ. 3 ದಿನ ಮಾಡುವ ಕೆಲಸವನ್ನು 1 ದಿನವೇ ಮಾಡುವ ವಿಶೇಷ ಸಾಮರ್ಥ್ಯವನ್ನು ರೈತರಿಗೆ ಅತೀ ಉಪಯುಕ್ತವಾದ ವರದಾನ ಮಲ್ಟಿ ಹೆಡ್ ಗ್ರಾಸ್ ಕಟರ್ ಹೊಂದಿದೆ. ಮಲ್ಟಿ ಹೆಡ್ ಗ್ರಾಸ್ ಕಟರ್ ಬಳಕೆಯಿಂದ ಇಂಧನದ ಉಳಿತಾಯದ ಜೊತೆಗೆ ಸಮಯ, ಕೆಲಸದ ಆಳುಗಳ ಉಳಿತಾಯವೂ ಆಗುತ್ತದೆ. ಬೆಟ್ಟಗುಡ್ಡ ಸಹಿತ ಎಲ್ಲಾ ಜಾಗದಲ್ಲೂ ಉಪಯೋಗಿಸುವಂತೆ ಯಂತ್ರದ ರಚನೆಯನ್ನು ಮಾಡಲಾಗಿದ್ದು ಮಕ್ಕಳು ಮಹಿಳೆಯರು ಸೇರಿ ಯಾರೂ ಕೂಡ ಉಪಯೋಗಿಸಬಹುದಾಗಿದೆ.
ಬಾಲಸುಬ್ರಹ್ಮಣ್ಯ ಹೆಚ್ ಎಮ್ ಅವರು ಡಬಲ್ ಹೆಡ್ ಮತ್ತು ತ್ರಿಬಲ್ ಹೆಡ್ ಗ್ರಾಸ್ ಕಟರ್ ಅನ್ನು ಹೊಸ ಅವಿಷ್ಕಾರದ ಮೂಲಕ ನಾಡಿಗೆ ಪರಿಚಿಯಿದ್ದಾರೆ. ವಿಶ್ವದಲ್ಲೇ ಮೊದಲ ಭಾರಿಗೆ ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಾಧುನಿಕವಾಗಿ ತಯಾರಿಸಿದ ಮಲ್ಟಿ ಹೆಡ್ ಗ್ರಾಸ್ ಕಟರ್ ಈ ತನಕ ಯಾರೂ ತಯಾರಿಸದ ಬಾರತೀಯ ಯುವ ಸಾಧಕ ಹಾಸನ ಅರಕಲಗೂಡಿನ ಬಾಲಸುಬ್ರಹ್ಮಣ್ಯ ಹೆಚ್ ಎಮ್ ಅವರು ಕರ್ನಾಟಕದಲ್ಲೇ ಸಂಶೋಧನೆ ಮಾಡಿದ ಭಾರತದ ಹೆಮ್ಮೆಯ ಉತ್ಪನ್ನವಾಗಿದೆ. ಅಡಿಕೆ ತೆಂಗು ಕಾಫಿ ಬಾಳೆ ತೋಟಗಳ ಮತ್ತು ತರಕಾರಿ ಬೆಳೆಯ ಕಳೆ ಹುಲ್ಲನ್ನು ಕೀಳಲು ಅತ್ಯಂತ ಉಪಯುಕ್ತವಾಗಿದೆ. ಮಲ್ಟಿ ಹೆಡ್ ಗ್ರಾಸ್ ಕಟರ್ ನ್ನು ಕೊಂಡು ಬಳಸಿ ಹಣ ಸಮಯ ಎಲ್ಲವನ್ನೂ ಉಳಿಸಿಕೊಂಡು ಉತ್ತಮವಾಗಿ ಕೆಲಸ ಮಾಡಬಹುದಾಗಿದೆ. ರೈತರಿಗೆ ಅತ್ಯುಪಯುಕ್ತವಾದ ಸ್ವದೇಶಿ ಉತ್ಪನ್ನವನ್ನು ಬಳಸಿ ಕೆಲಸದಲ್ಲಿ ಪರಿಪೂರ್ಣತೆಯನ್ನು ಪಡೆಯಬಹುದು. ವಿದೇಶಕ್ಕೆ ಒಮ್ಮೆ ಹೊದವರು ವಿದೇಶದಲ್ಲೇ ವಾಸ್ತವ್ಯ ಮಾಡುವ ಈ ಕಾಲದಲ್ಲಿ 13 ವರ್ಷಗಳ ಕಾಲ ವಿಶ್ವದ 8 ದೇಶಗಳಲ್ಲಿ ಕಾರು ಡಿಸೈನರ್ ಆಗಿ ಸೇವೆ ಮಾಡಿದ ಬಾಲಸುಬ್ರಹ್ಮಣ್ಯ ಹೆಚ್ ಎಮ್ ವಿದೇಶದಿಂದ ಹುಟ್ಟೂರಿಗೆ ಬಂದು ನನ್ನೂರಿಗೆ ನನ್ನ ದೇಶಕ್ಕೆ ಸೇವೆ ನೀಡಬೇಕು ಎಂಬ ಹಂಬಲದಿಂದ ಹೊಸ ಹೊಸ ಅವಿಷ್ಕಾರಗಳನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ. ಗ್ರಾಸ್ ಕಟರ್ ಸೇರಿ ಇನ್ನಷ್ಟು ಹೊಸ ಅವಿಷ್ಕಾರಗಳ ಮೂಲಕ ಕೃಷಿಕರಿಗೆ ಉಪಯುಕ್ತವಾದ ಯಂತ್ರಗಳನ್ನು ನಾಡಿಗೆ ಪರಿಚಯಿಸುವ ಮಹತ್ವಕಾಂಕ್ಷೆಯನ್ನು ಬಾಲಸುಬ್ರಹ್ಮಣ್ಯ ಹೆಚ್ ಎಮ್ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಮಲ್ಟಿ ಪರ್ಪಸ್ ಬ್ರಷ್ ಕಟರ್ ನಲ್ಲೆ ಚೈನ್ ಸಾ, ಸ್ಪ್ರೇ ಪಂಪ್, ಗುಂಡಿ ಹೊಡೆಯುವ ಅಟ್ಯಾಚ್ಮೆಂಟ್ ಕೂಡ ಬರಲಿದೆ.
ಹೆಚ್ಚಿನ ಮಾಹಿತಿಗಾಗಿ 9606142520, 7259350487 ಸಂಪರ್ಕಿಸಬಹುದು.