ಉಡುಪಿ ನೇತ್ರ ಜ್ಯೋತಿ ಕಾಲೇಜ್ ವಿವಿಧ ಕೋರ್ಸು: ಕೆಲವೇ ಸೀಟುಗಳು ಲಭ್ಯ

ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜ್ ನಲ್ಲಿ ವಿವಿಧ ಕೋರ್ಸುಗಳಿಗೆ ದಾಖಲಾತಿ ಆರಂಭವಾಗಿದ್ದು, ಕೆಲವೇ ಕೆಲವು ಸೀಟುಗಳು ಲಭ್ಯವಿದೆ .

ಉಡುಪಿಯ ಪ್ರಸಾದ್ ನೇತ್ರಾಲಯದ ಅಂಗಸಂಸ್ಥೆ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನಲ್ಲಿ ಮುಂದಿನ ಸಾಲಿನ ಪ್ಯಾರಾಮೆಡಿಕಲ್, ಬಿಎಸ್ಸಿ, ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್ ಮತ್ತು ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸುಗಳಿಗೆ ದಾಖಲಾತಿ ಆರಂಭಗೊಂಡಿದ್ದು, ಈ ಕೆಳಗಿನ ವಿಭಾಗಗಳಲ್ಲಿ ಕೆಲವೇ ಸೀಟುಗಳು ಲಭ್ಯವಿದೆ.

ಬಿಎಸ್ಸಿ ಆಪರೇಷನ್ ಥಿಯೇಟರ್ ಕೋರ್ಸ್, ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್ ಕೋರ್ಸ್, ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮತ್ತು ಡಿಪ್ಲೊಮಾ ಕೋರ್ಸ್ ವಿಭಾಗದಲ್ಲಿ ಡಿಪ್ಲೊಮೋ ಲ್ಯಾಬ್ ಟೆಕ್ನಾಲಜಿ , ಡಿಪ್ಲೋಮೋ ಇನ್ ಆಪರೇಷನ್ ಥಿಯೇಟರ್, ಡಿಪ್ಲೋಮಾ ಇನ್ ಡಯಾಲಿಸಿಸ್, ಡಿಪ್ಲೊಮ ಇನ್ ಮೆಡಿಕಲ್ ರೆಕಾರ್ಡ್ , ಟೆಕ್ನಿಷಿಯನ್, ಡಿಪ್ಲೊಮ ಇನ್ ಹೆಲ್ತ್ ಇನ್ಸ್ಪೆಕ್ಟರ್ , ಡಿಪ್ಲೋಮೋ ಇನ್ ಎಕ್ಸರೇ, ಟೆಕ್ನಿಷಿಯನ್ ಡಿಪ್ಲೋಮೋ ಇನ್ ಆಪ್ತಲಕ್ಮ ಟೆಕ್ನಾಲಜಿ ಕೋರ್ಸುಗಳು ಲಭ್ಯವಿದೆ. ಎಲ್ಲಾ ಕೋರ್ಸುಗಳಿಗೆ ಫೀಸ್ ಅತಿಹೆಚ್ಚು ರಿಯಾಯಿತಿಯೊಂದಿಗೆ ನೇತ್ರ ಜ್ಯೋತಿ ಕಾಲೇಜ್ ಉಡುಪಿ 2020 – 21 ನೇ ಸಾಲಿನ ದಾಖಲಾತಿಯಲ್ಲಿ ನೀಡಲಾಗಿದೆ.


ಈ ಸಂಸ್ಥೆಯು ರಾಜೀವಗಾಂಧಿ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಪ್ಯಾರಾ ಮೆಡಿಕಲ್ ಬೋರ್ಡ್ ಮಾನ್ಯತೆ ಪಡೆದಿದೆ. ಈ ಎಲ್ಲಾ ಕೋರ್ಸುಗಳ ಅವಧಿ ಮೂರು ವರ್ಷ ಆಗಿದೆ ಕಾಲೇಜಿನಲ್ಲಿ ನುರಿತ ಶಿಕ್ಷಕರ ಅತ್ಯುತ್ತಮ ಕಲಿಕಾ ಸೌಲಭ್ಯ ಹೊಂದಿದೆ ವೈಶಿಷ್ಟ್ಯಗಳು ಕ್ಯಾಂಪಸ್ ಇಂಟರ್ವ್ಯೂ ಹಾಸ್ಟೆಲ್ ಸೌಲಭ್ಯ, ಉಚಿತ ಕಾಲೇಜ್ ಬಸ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ತರಬೇತಿ ಸ್ಕಾಲರ್ಶಿಪ್ ಸುಸಜ್ಜಿತ ಪ್ರಯೋಗಾಲಯ ಗಳಿವೆ ಮತ್ತು ಫೀಸ್ ಗಳಲ್ಲಿ ಅತಿ ಹೆಚ್ಚು ರಿಯಾಯಿತಿಯೊಂದಿಗೆ ದಾಖಲಾತಿ ಹೊಂದಲು ಅವಕಾಶ ನೀಡಲಾಗಿದೆ .


ಡಿಪ್ಲೋಮೋ ಕೋರ್ಸ್ ಗಳಿಗೆ ದಾಖಲಾತಿ ಪಡೆಯಲು ಕನಿಷ್ಠ ಎಸ್ಎಸ್ಎಲ್ ಸಿ, ಪಿಯುಸಿ (ಆರ್ಟ್ಸ್, ಕಾಮರ್ಸ್, ಸಾಯನ್ಸ್) ವಿದ್ಯಾರ್ಹತೆ ಹೊಂದಿರಬೇಕು. ಬಿಎಚ್ ಎ ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಮತ್ತು ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್ ಕೋರ್ಸ್ಗಳಿಗೆ ದಾಖಲಾತಿ ಹೊಂದಲು ಕನಿಷ್ಠ ಪಿಯುಸಿ ಕಾಮರ್ಸ್ ಅಥವಾ ಸೈನ್ಸ್ ವಿದ್ಯಾರ್ಹತೆ ಇರಬೇಕು. ಬಿಎಸ್ಸಿ ಆಪರೇಷನ್ ಥಿಯೇಟರ್ ಕನಿಷ್ಠ ಪಿಯುಸಿ ಸಾಯನ್ಸ್ ವಿದ್ಯಾರ್ಹತೆ ಹೊಂದಿರಬೇಕು.

ಸೇರ್ಪಡೆ ಬಯಸುವ ವಿದ್ಯಾರ್ಥಿಗಳು ಉಡುಪಿ ಅಲಂಕಾರ್ ಚಿತ್ರಮಂದಿರ ಹಿಂಬದಿಯಿರುವ ಎ.ಜೆ ಅಲ್ಸೇ ರಸ್ತೆಯಲ್ಲಿರುವ ಪ್ರಸಾದ್ ನೇತ್ರಾಲಯ ನೇತ್ರ ಜ್ಯೋತಿ ಇನ್ಸಿಟ್ಯೂಟ್ ಆಫ್ ಲೈಟ್ ಹೆಲ್ತ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9738948296

Leave a Reply

Your email address will not be published. Required fields are marked *

error: Content is protected !!