ಸಹಕಾರಿ ವ್ಯವಸ್ಥೆಗೆ ಧ್ವನಿಯಾಗುವೆ: ಶಾಸಕ ಯಶ್ಪಾಲ್ ಸುವರ್ಣ
ಉಡುಪಿ: ಸ್ವತಃ ಸಹಕಾರಿ ರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ತಾನು, ವಿಧಾನ ಮಂಡಲದಲ್ಲಿ ಸಹಕಾರಿಯ ಧ್ವನಿಯಾಗುವೆ ಎಂದು ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಡಯಾನ ಹೋಟೆಲ್ ಹಾಲ್ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಹಕಾರಿಗಳನ್ನು ಪರಿಗಣಿಸಬೇಕು ಎಂದು ಹಿಂದಿನಿಂದಲೂ ಪ್ರತಿಪಾದಿಸಿದ್ದ ನನಗೆ ಶಾಸಕನಾಗುವ ಅವಕಾಶ ಲಭಿಸಿದೆ. ಉಡುಪಿಯಲ್ಲಿ ಸಹಕಾರ ಸೌಧ ನಿರ್ಮಾಣ ಹಾಗೂ ಸಹಕಾರಿ ತರಬೇತಿ ಕೇಂದ್ರ ಸ್ಥಾಪನೆ ಬಗ್ಗೆ ಗಮನಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಉಪನಿರ್ದೇಶಕ ಅಧಿಕಾರ ಸ್ವೀಕರಸಿದ ರಮೇಶ್ ಹಾಗೂ ಮೂಡುಬಿದ್ರೆ ಸಹಕಾರಿ ತರಬೇತಿ ಕೇಂದ್ರದ ನೂತನ ಪ್ರಾಂಶುಪಾಲ ಡಾl ವಿಶ್ವೇಶ್ವರಯ್ಯರವರನ್ನು ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಅಭಿನಂದಿಸಲಾಯಿತು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಕೇಂದ್ರ ಸಹಕಾರ ಸಂಘ ನಿರ್ದೇಶಕ ಡಾ. ಐಕಳಬಾವ ದೇವಿಪ್ರಸಾದ ಶೆಟ್ಟಿ ಬೆಳಪು, ಯೂನಿಯನ್ ಉಪಾಧ್ಯಕ್ಷ ಅಶೋಕ್ ಬಲ್ಲಾಳ್, ಜಿಲ್ಲಾ ಸಹಕಾರಿ ಉಪನಿರ್ದೇಶಕ ರಮೇಶ್ ಇದ್ದರು.ಯೂನಿಯನ್ ನಿರ್ದೇಶಕ ಶ್ರೀಧರ ಪಿ.ಎಸ್.ಸ್ವಾಗತಿಸಿ,ನಿರೂಪಿಸಿದರು. ಸಿಇಓ ಹರೀಶ್ ಬಿ.ಪಿ. ವಂದಿಸಿದರು. ಯೂನಿಯನ್ ನಿರ್ದೇಶಕರು ಸಂಸ್ಥೆಯ ಸಿಂಬ್ಬದಿಗಳು ಉಪಸ್ಥಿತರಿದ್ದರು.