ಮೂರು ಬೋಟ್ ಮುಳುಗಡೆ, ನಿಲ್ಲದ ಮಳೆಯ ರೌದ್ರ ನರ್ತನ: ಎನ್’ಡಿಆರ್’ಎಫ್ ತಂಡ ದೌಡು
ಉಡುಪಿ: (ಉಡುಪಿ ಟೈಮ್ಸ್ ವರದಿ) ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದು, ಈ ನಡುವೆ ಮಲ್ಪೆಯಲ್ಲಿ 3 ಬೋಟ್ ಗಳು ಸಮುದ್ರದ ಅಬ್ಬರಕ್ಕೆ ಸಿಲುಕಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಐವರು ಮೀನುಗಾರರು ಕಲ್ಲು ಬಂಡೆಯ ಆಶ್ರಯ ಪಡೆದಿದ್ದವರನ್ನು ಇನ್ನೊಂದು ಬೋಟ್ ಮೂಲಕ ಹೋದ ಸ್ಥಳೀಯರು ರಕ್ಷಿಸಿದ್ದಾರೆ.
ಮಂಗಳೂರಿನಿಂದ ಕೇಂದ್ರ ಎನ್ ಡಿಆರ್ ಎಫ್ ದೌಡು
ಮಂಗಳೂರು ಉಸ್ತುವಾರಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ಮೇರೆಗೆ ವಿಶೇಷ ಸುರಕ್ಷತಾ ಉಪಕರಣಗಳು ಮತ್ತು ಬೋಟ್ ನೊಂದಿಗೆ ಉಡುಪಿ ಆಗಮಿಸಿದ ರಕ್ಷಣಾ ತಂಡ ನೆರೆಯ ನೀರಿನಿಂದ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಂತರಿಸುತ್ತಿದ್ದಾರೆ.
ನೆರೆಪೀಡಿತ ಕುಕ್ಕೆಹಳ್ಳಿ,ಉಪ್ಪೂರು, ಕೊಳಲಗಿರಿ, ಮೂಡನಿಡಂಬೂರು, ಉದ್ಯಾವರ ಹಾಗು ಇನ್ನಿತರ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಕೋಟ ಸೂಚನೆ ನೀಡಿದ್ದಾರೆ