ಗುಂಡಿಬೈಲ್ ಅವೈಜ್ಞಾನಿಕವಾಗಿ ರಸ್ತೆ ವಿಭಾಜಕ ತೆರವು- ಅಪಘಾತಕ್ಕೆ ಆಹ್ವಾನ

ಉಡುಪಿ: ನಗರದ ಗುಂಡಿಬೈಲ್ ಮುಖ್ಯರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ವಿಭಾಜಕ ತೆಗೆದು ಅಪಫಾತಕ್ಕೆ ಆಹ್ವಾನ ನೀಡಿದ ಉಡುಪಿ ನಗರ ಸಭೆಯ ಅಧಿಕಾರಿಗಳು.

ಕಲ್ಸಂಕದಿಂದ ಗುಂಡಿಬೈಲ್‌ವರೆಗೆ ಈಗಾಗಲೇ ಹಲವಾರು ಕಡೆ ರಸ್ತೆಯಲ್ಲಿ ಯುಟರ್ನ್ ಅಳವಡಿಸಲಾಗಿದೆ. ಆದರೆ ಈಗ ಗುಂಡಿಬೈಲ್ ಪೆಟ್ರೋಲ್ ಪಂಪ್ ಬಳಿ ಯುಟರ್ನ್ ಇದ್ದು ಅಲ್ಲೆ ಹತ್ತಿರ ಇಪ್ಪತ್ತು ಮೀಟರ್ ಬಳಿ ಇನ್ನೊಂದು ಯುಟರ್ನ್‌ಗಾಗಿ ರಸ್ತೆ ವಿಭಾಜಕ ಒಡೆದು ಹಾಕಲಾಗಿದೆ.

ಈ‌ ರೀತಿಯಲ್ಲಿ ಅಧಿಕಾರಿಗಳು,‌ ಸ್ಥಳೀಯ ಉದ್ಯಮಿಗಳು ತಮಗೆ ಬೇಕಾದ‌ ಕಡೆ ರಸ್ತೆ ವಿಭಾಜಕ ಒಡೆದು ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆಂದು ವಾಹನ ಸವಾರರು ದೂರಿದ್ದಾರೆ.

ದಿನ ನಿತ್ಯ ಅಪಘಾತಗಳ ಸರಮಾಲೆ: ಇಪ್ಪತ್ತು ಮೀಟರ್ ಅಂತರಲ್ಲಿ ಎರಡೆರಡು ಯುಟರ್ನ್ ಮಾಡಿರುವುದರಿಂದ ಕಲ್ಸಂಕದಿಂದ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆಕ್ಕಿಡಾಗಿದೆಂದು‌ ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಸ್ಥಳೀಯ ಉದ್ಯಮಿಯೊಬ್ಬರ ಲಾಭಿಗೆ‌ ಮಣಿದರೇ ನಗರ ಸಭಾ‌‌‌ ಸದಸ್ಯ?

ಸಂಚಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ ಈ ಯುಟರ್ನ್. ಡಿವೈಡರ್ ಒಡೆದು ಹಾಕಿದ ಪರಿಣಾಮ ಈ ಭಾಗದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಈ ಬಗ್ಗೆ ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!