ಎನ್.ಎಸ್.ಯು.ಐ. ರಾಷ್ಟ್ರೀಯ ಸಂಯೋಜಕರಾಗಿ ಕ್ರಿಸ್ಟನ್ ಡಿ’ಅಲ್ಮೇಡಾ ನೇಮಕ

ಉಡುಪಿ : (ಉಡುಪಿ ಟೈಮ್ಸ್ ವರದಿ) ಉಡುಪಿ ಜಿಲ್ಲಾ NSUI ಅಧ್ಯಕ್ಷರಾಗಿರುವ ಕ್ರಿಸ್ಟನ್ ಆಲ್ಮೇಡಾ  ಮುದರಂಗಡಿ ಅವರನ್ನು ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿಯ ಸಂಯೋಜಕರನ್ನಾಗಿ  ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಸೂಚನೆ ಮೇರೆಗೆ ಎನ್.ಎಸ್.ಯು.ಐ. ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ ಅವರು ಕರ್ನಾಟಕದಿಂದ ರಾಷ್ಟ್ರೀಯ ಸಮಿತಿಗೆ ಸಂಯೋಜಕರನ್ನಾಗಿ ಕ್ರಿಸ್ಟನ್ ಡಿ’ಆಲ್ಮೇಡಾ ಅವರನ್ನು ನೇಮಕಗೊಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದಿಂದ ಕ್ರಿಸ್ಟನ್ ಅಲ್ಮೇಡಾ ಸಹಿತ ಒಟ್ಟು ಇಬ್ಬರು ಆಯ್ಕೆಯಾಗಿದ್ದು, ಮತ್ತೋರ್ವ ಸಂಯೋಜಕರಾಗಿ ಜಯೇಂದರ್ ಶಾಹಿ ನೇಮಕಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಕ್ರಿಸ್ಟನ್ ಡಿ ಆಲ್ಮೇಡಾ ಅವರು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಘಟಕವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿದ್ಯಾರ್ಥಿಗಳ ಸಮಸ್ಯೆಗಳ ವಿಚಾರದಲ್ಲಿ ಹೋರಾಟಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹಳಷ್ಟು ವರ್ಷಗಳ ಬಳಿಕ  ಜಿಲ್ಲೆಯಲ್ಲಿ ಎನ್ಎಸ್ ಯುಐ ವಿದ್ಯಾರ್ಥಿ ಸಂಘಟನೆಯನ್ನು ಬಲಿಷ್ಠಗೊಳಿಸುವಲ್ಲಿ ಪ್ರಯತ್ನಿಸಿದ್ದಲ್ಲದೆ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!