ಉಡುಪಿ: ಸೋಂಕಿತರ ಸಂಖ್ಯೆ 149ಕ್ಕೆ, ಒಟ್ಟು 6,707 ಮಂದಿಯ ವರದಿ ಬಾಕಿ!
ಉಡುಪಿ: ಜಿಲ್ಲೆಯಲ್ಲಿ ಗುರುವಾರ 29 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 20 ಪುರುಷರು, 8 ಮಹಿಳೆಯರ ಹಾಗೂ ಒಬ್ಬಳು ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲರಿಗೂ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದು ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ 26, ತೆಲಂಗಾಣದಿಂದ ಇಬ್ಬರು ಹಾಗೂ ಕೇರಳದಿಂದ ಬಂದಿದ್ದ ಒಬ್ಬರಲ್ಲಿ ಸೋಕು ಇದ್ದು, ಅವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
ಗುರುವಾರ 298 ವರದಿಗಳು ನೆಗಟಿವ್ ಬಂದಿದ್ದು, 29 ಪಾಸಿಟಿವ್ ಬಂದಿವೆ. ಗುರುವಾರ 20 ಮಾದರಿಗಳನ್ನು ಲ್ಯಾಬ್‌ಗಳಿಗೆ ರವಾನಿಸಲಾಗಿದೆ.
ಜಿಲ್ಲೆಯಿಂದ ಇದುವರೆಗೂ 10,965 ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 6,707 ವರದಿಗಳು ಬರುವುದು ಬಾಕಿ ಇದೆ. ಇದುವರೆಗೂ ಬಂದಿರುವ ವರದಿಗಳಲ್ಲಿ 4109 ನೆಗೆಟಿವ್‌ಗಳಿದ್ದು, 149 ಪಾಸಿಟಿವ್ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದ 7 ಪುರುಷರು ಹಾಗೂ ಇಬ್ಬರು ಮಹಿಳೆಯರು ಗುರುವಾರ ಐಸೊಲೇಷನ್ ವಾರ್ಡ್‌ಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, 29 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 678 ಮಂದಿ ಐಸೊಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 149ಕ್ಕೇರಿಕೆಯಾಗಿದೆ. ಕೋವಿಡ್‌ಗೆ ಒಬ್ಬರು ಮೃತಪಟ್ಟಿದ್ದು, ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 145 ಸಕ್ರಿಯ ಪ್ರಕರಣಗಳು ಇವೆ