ಉಡುಪಿ: ಮರಳಿಗೆ ದರ ನಿಗದಿ- ಜಿಲ್ಲಾಧಿಕಾರಿ

ಉಡುಪಿ ಸೆ.19: (ಉಡುಪಿಟೈಮ್ಸ್ ವರದಿ)ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ರ ತಿದ್ದುಪಡಿ ನಿಯಮಗಳು2020 ರನ್ವಯ ಸರ್ಕಾರವು ಪ್ರತಿ ಮೆ.ಟನ್ ಮರಳಿಗೆ ರೂ.60 ರಿಂದ ರಾಜಧನವನ್ನು ಪ್ರಸ್ತುತ ರೂ. 80 ಕ್ಕೆ ಹೆಚ್ಚಿಸಿರುವುದರಿಂದ, ರಾಜಧನದೊಂದಿಗೆ ಇತರೆ ಶುಲ್ಕಗಳನ್ನು ಹೆಚ್ಚುವರಿಯಾಗಿ ಪರವಾನಿಗೆದಾರರು ಸರ್ಕಾರಕ್ಕೆ ಪಾವತಿಸಬೇಕಾಗಿರುವುದರಿಂದ, ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಇರುವ ಜಿಲ್ಲಾ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ ಈ ಹಿಂದೆ ನಿಗಧಿಪಡಿಸಿದ್ದ ದರವನ್ನು ಪುನರ್ ಪರಿಶೀಲಿಸಿ ಈ ಕೆಳಕಂಡಂತೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ತೆರವುಗೊಳಿಸುವ ಮರಳಿಗೆ ದರ ನಿಗಧಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ 7 ಸದಸ್ಯರ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಜಿ.ಜಗದೀಶ್ ತಿಳಿಸಿದ್ದಾರೆ.


ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (ಸಿಆರ್‌ಝಡ್ ಪ್ರದೇಶದ ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳೊಂದಿಗೆ ತೆರವುಗೊಳಿಸಿದ ಮರಳಿನ ದರ ಪ್ರತಿ ಟನ್ ಗೆ (ಸಾಗಾಟ ಪರವಾನಗಿಯೊಂದಿಗೆ) ರೂ.600 (ಹಳೆಯ ದರ 550) ಅಂದರೆ 10 ಮೆ.ಟನ್ ಗೆ 6000 ಹಾಗೂ ಲೋಡಿಂಗ್ ವೆಚ್ಚ ,8 ರಿಂದ10 ಮೆ.ಟನ್ ವಾಹನಕ್ಕೆ ರೂ. 700, 4 ರಿಂದ 8 ಮೆ.ಟನ್ ವಾಹನಕ್ಕೆ ರೂ. 500, 1 ರಿಂದ 4 ಮೆ.ಟನ್ ವರೆಗೆ ರೂ. 300.


ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ :

ದೊಡ್ಡ ಲಾರಿಗೆ : 20ಕಿ.ಮೀಟರ್‌ವರೆಗೆ ಸಾಗಾಣಿಕೆ ದರ ರೂ.3000,(8 ರಿಂದ 10 ಮೆ.ಟನ್) ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ. 50/- (20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ.ಮೀಟರ್‌ಗೆ ಹೋಗುವ ಮತ್ತು ಬರುವ ಕಿ. ಮೀಟರ್ ಒಳಗೊಂಡಂತೆ)
ಮಧ್ಯಮ ಗಾತ್ರದ ವಾಹನಗಳಿಗೆ : 20 ಕಿ.ಮೀಟರ್‌ವರೆಗೆ ಸಾಗಾಣಿಕೆ ದರ ರೂ. (4 ರಿಂದ 8 ಮೆ.ಟನ್) 2000/-, ನಂತರದ ಪ್ರತಿ ಕಿ.ಮೀಟರ್‌ಗೆ ರೂ. 40-(20 ಕಿ.ಮೀಟರ್ ಹೊರತು ಪಡಿಸಿದ ನಂತರದ ಪ್ರತಿ ಕಿ. ಮೀಟರ್‌ಗೆ ಹೋಗುವ ಮತ್ತು ಬರುವ ಕಿ. ಮೀಟರ್ ಒಳಗೊಂಡಂತೆ)
ಸಣ್ಣ ವಾಹನಗಳಿಗೆ : 20 ಕಿ.ಮೀಟರ್‌ವರೆಗೆ ಸಾಗಾಣಿಕೆ ದರ ರೂ. (1 ರಿಂದ 4 ಮೆ.ಟನ್ ವರೆಗೆ) 1500/- ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ. 35/-(20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ. ಮೀಟರ್‌ಗೆ ಹೋಗುವ ಮತ್ತು ಬರುವ ಕಿ. ಮೀಟರ್ ಒಳಗೊಂಡಂತೆ)

ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿ ಸಂಗ್ರಹಿಸಿದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಜಿಲ್ಲೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ: 0820-2574802 1077 (ಟೋಲ್ ಫ್ರೀ) ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು: ಆರ್. ಪದ್ಮಶ್ರೀ, ಭೂವಿಜ್ಞಾನಿ : 9980951087, ಗೌತಮ್ ಶಾಸ್ತಿç ಹೆಚ್, ಭೂವಿಜ್ಞಾನಿ :6361286320, ಸಂಧ್ಯಾಕುಮಾರಿ, ಭೂವಿಜ್ಞಾನಿ : 9901370559 ಹಾಜಿರಾ ಸಜಿನಿ ಎಸ್, ಭೂವಿಜ್ಞಾನಿ : 9663836959

Leave a Reply

Your email address will not be published. Required fields are marked *

error: Content is protected !!