ಮಂಗಳೂರು- ಮುಂಬೈಗೆ ಮಲ್ಟಿಆಕ್ಸಲ್ ವೋಲ್ವೋ, ನಾನ್ ಎಸಿ. ಸ್ಲೀಪರ್ ಬಸ್ ಸೌಲಭ್ಯ

ಮಂಗಳೂರು ಸೆ. 19:- ವಿಭಾಗದ ಮಂಗಳೂರು ಬಸ್ಸು ನಿಲ್ದಾಣದಿಂದ ಪೂನಾ ಹಾಗೂ ಮುಂಬೈಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಮಲ್ಟಿಆಕ್ಸಲ್ ವೋಲ್ವೋ  ಹಾಗೂ ನಾನ್ ಎಸಿ. ಸ್ಲೀಪರ್ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಸೆಪ್ಟೆಂಬರ್ 24 ರಿಂದ ಆರಂಭಿಸಲಾಗುತ್ತದೆ.

ಈ ಹಿನ್ನಲೆಯಲ್ಲಿ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ.


 ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರಗಳು ಈ ಕೆಳಗಿನಂತಿವೆ:- ನಾನ್ ಎಸಿ ಸ್ಲೀಪರ್ ಬಸ್ ಮಂಗಳೂರಿನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಪೂನಾ, ಮುಂಬೈಗೆ  ಬೆಳಿಗ್ಗೆ 7.30 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,600

ಮುಂಬೈಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಪೂನಾ, ಬೆಳಗಾವಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್, ಮಂಗಳೂರಿಗೆ ಬೆಳಿಗ್ಗೆ 7.30 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,600.

ಮಲ್ಟಿಆಕ್ಸ್‍ಲ್ ವೋಲ್ಟೋ ಬಸ್ ಮಂಗಳೂರಿನಿಂದ  ಮಧ್ಯಾಹ್ನ 1 ಗಂಟೆಗೆ ಹೊರಟು ಮೂಡಬಿದ್ರಿ, ಕಾರ್ಕಳ, ನಿಟ್ಟೆ, ಬೆಳ್ಮಣ್, ಶಿರ್ವಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಪೂನಾ, ಮುಂಬೈಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,800.

ಮುಂಬೈಯಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಪೂನಾ, ಬೆಳಗಾವಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಶಿರ್ವಾಮಂಚಕಲ್, ಬೆಳ್ಮಣ್, ನಿಟ್ಟೆ, ಕಾರ್ಕಳ, ಮೂಡಬಿದ್ರಿ, ಮಂಗಳೂರಿಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,800.


ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು ವೆಬ್ ಸೈಟ್  ಅಥವಾ ಹತ್ತಿರದ ರಿಸರ್ವೇಶನ್ ಕೌಟಂರ್ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ  ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ  ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!