ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ, ಜೂನ್ 1ರಿಂದ ಹೋರಾಟ ಮಾಡುತ್ತೇವೆ- ಪ್ರತಾಪ್ ಸಿಂಹ

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತಿದ್ದೀರಾ ಇದನ್ನು ಮೊದಲು ನಿಲ್ಲಿಸಿ. ಸಿಎಂ ಕುರ್ಚಿ ಶಾಶ್ವತವಲ್ಲ. ಆದರೆ, ಪೊಲೀಸ್ ವ್ಯವಸ್ಥೆ ಶಾಶ್ವತವಾಗಿರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರತಾಪ್ ಸಿಂಹ ಅವರು, ಮತದಾರರು ಕಾಂಗ್ರೆಸ್ ಮುಖ ನೋಡಿ ಮತ ಹಾಕಿಲ್ಲ. ಕಾಂಗ್ರೆಸ್ ನೀಡಿದ ಕ್ಯಾರಂಟಿಗಳನ್ನು ನೋಡಿ ಮತ ಹಾಕಿದ್ದಾರೆ. ಹೀಗಾಗಿ ಗ್ಯಾರಂಟಿಗಳನ್ನು ಬೇಗ ಈಡೇರಿಸಿ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಇನ್ನು ಗ್ಯಾರಂಟಿಗಳನ್ನು ಸಮನಾಗಿ ನೀಡಿ. ಒಂದು ವೇಳೆ ಷರತ್ತು ಹಾಕಿದರೆ ಜೂನ್ 1ರ ನಂತರ ಹೋರಾಟ ಮಾಡುತ್ತೇವೆ ಎಂದರು. 

ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ತನಿಖೆಗೆ ಆದೇಶಿ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸವಾಲು ಹಾಕಿದರು. 

ಇನ್ನು ಮೈಸೂರು ನನ್ನ ಕ್ಷೇತ್ರ. ಮೈಸೂರಿನ ಅಭಿವೃದ್ಧಿಗಾಗಿ ನಾನು ಯಾರ ಬಳಿ ಬೇಕಾದರೂ ಹೋಗುತ್ತೇನೆ. ಕೊಡಗು ಮತ್ತು ಮೈಸೂರು ಅಭಿವೃದ್ಧಿಗಾಗಿ ಯಾರ ಕೈಕಾಲು ಬೇಕಾದರೂ ಹಿಡಿಯುತ್ತೇನೆ. ಚುನಾವಣೆ ಬಂದಾಗ ಅಷ್ಟೇ ರಾಜಕಾರಣ ಮಾಡಬೇಕು. ಉಳಿದ ಸಮಯದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದರು. ಅಭಿವೃದ್ಧಿ ವಿಚಾರವಾಗಿ ನಾನು ಸಿಎಂ ಮನೆಗೆ ಹೋಗುತ್ತೇನೆ ಎಂದರು. 

Leave a Reply

Your email address will not be published. Required fields are marked *

error: Content is protected !!