ಡಿಕೆಶಿ ಪ್ರಬಲ ಖಾತೆಗೆ ಪಟ್ಟು- ಜಮೀರ್ ಸಂಪುಟ ಸೇರಲು ಅಡ್ಡಗಾಲು
ಬೆಂಗಳೂರು: ಪ್ರಮುಖ ಖಾತೆಗಳನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿದ ನಂತರವಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷದ ಹೈಕಮಾಂಡ್ ರೂಪಿಸಿದ ಸರದಿ ಮುಖ್ಯಮಂತ್ರಿ ಸೂತ್ರದ ಪ್ರಕಾರ ಸಿದ್ದರಾಮಯ್ಯನವರ ಎರಡೂವರೆ ವರ್ಷಗಳ ಅಧಿಕಾರಾವಧಿ ಮುಗಿದ ನಂತರ ಶಿವಕುಮಾರ್ ಅವರಿಗೆ ಉನ್ನತ ಸ್ಥಾನವನ್ನು ನೀಡುತ್ತದೆ, ಇದರಿಂದ ಡಿಕೆಶಿಗೆ ದೊಡ್ಡ ಲಾಭವಾಗಲಿದೆ. ಶಿವಕುಮಾರ್ ಅವರ ಆಪ್ತರಿಗೆ ಸಚಿವ ಸಂಪುಟದಲ್ಲಿ 20 ಸ್ಥಾನ ಹಾಗೂ ಇದರ ಜೊತೆಗೆ ಜಲಸಂಪನ್ಮೂಲ ಮತ್ತು ಇಂಧನ ಎರಡು ಪ್ರಮುಖ ಖಾತೆಗಳನ್ನು ಪಡೆಯುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 13 ಸಚಿವ ಸ್ಥಾನ ಬಿಟ್ಟು ಕೊಡಲಾಗುತ್ತದೆ ಎಂದು ತಿಳಿದು ಬಂದಿದೆ.
ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಲ್ಲದಿದ್ದರೆ, ಮೇ 13 ರಂದು ಫಲಿತಾಂಶ ಹೊರಬಿದ್ದ ನಂತರ ನಾಲ್ಕು ದಿನಗಳ ಕಾಲ ಸಿಎಂ ವಿಷಯವನ್ನು ಎಳೆಯುವುದು ಶಿವಕುಮಾರ್ ಅವರಿಗೆ ಕಷ್ಟಕರವಾಗಿತ್ತು. ಶಿವಕುಮಾರ್ ತಮ್ಮ ವಾದ ಮಂಡಿಸಲು ಮತ್ತಷ್ಚು ಸಮಯ ಪಡೆದರ. ಲಾಭ ಪಡೆಯಲು ಮುಖ್ಯಮಂತ್ರಿ ಹುದ್ದೆಗೆ ಖರ್ಗೆ ಹೆಸರನ್ನು ಸೂಚಿಸಿದರು. ಹೈಕಮಾಂಡ್ ಕೂಡ ಸಿಎಂ ಹುದ್ದೆಗೆ ಇಷ್ಟೊಂದು ಕಸರತ್ತು ನಡೆಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಪಸಂಖ್ಯಾತರಲ್ಲಿ, ಶಿವಕುಮಾರ್ ಈಗಾಗಲೇ ಹಿರಿಯ ನಾಯಕರಾದ ಯು ಟಿ ಖಾದರ್ ಮತ್ತು ತನ್ವೀರ್ ಸೇಠ್ ಅವರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಹೊರಗಿಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ಸಿದ್ದರಾಮಯ್ಯನವರ ಕಟ್ಟಾ ನಿಷ್ಠಾವಂತ ಜಮೀರ್ ಇಂತಹ ನಿರ್ಧಾರವನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ತಮ್ಮ ಸ್ಥಾನಕ್ಕೆ ಧಕ್ಕೆ ತರಬಹುದಾದ ಹೆಚ್ಚಿನ ಶಕ್ತಿ ಕೇಂದ್ರಗಳನ್ನು ಪರಿಶೀಲಿಸುವ ಚಾಣಾಕ್ಷ ನಡೆಯಲ್ಲಿ ಅವರು ಹೆಚ್ಚಿನ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯನ್ನು ತಪ್ಪಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ದಲಿತ ಕೋಟಾದಡಿ ಸಿಎಂ ಸ್ಥಾನಕ್ಕೆ ಅಖಾಡಕ್ಕಿಳಿದಿದ್ದ ಡಾ.ಜಿ.ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆಯಾದರೂ ಸಿಗುತ್ತದೆ ಎಂದು ನಂಬಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ನಡೆಸುತ್ತಿದ್ದ ಜಗಳದಿಂದ, ಗೊಂದಲ ಹೆಚ್ಚಬಹುದೆಂಬ ಕಾರಣಕ್ಕೆ ನಾನು ಲಾಬಿ ಮಾಡಲು ಬಯಸಲಿಲ್ಲ ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಾರೆ, ಇದು ಬಿಬಿಎಂಪಿ ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸೇರಿದಂತೆ ಮುಂಬರುವ ಹಲವು ಚುನಾವಣೆಗಳಿಗೆ ನಿರ್ಣಾಯಕವಾಗಿದೆ ಮತ್ತು ಮುಖ್ಯವಾಗಿ 2024 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಕುಮಾರ್ ಷರತ್ತುಗಳಿಗೆ ಹೈಕಮಾಂಡ್ ಅಸ್ತು ಎಂದಿದ ಎನ್ನಲಾಗಿದೆ.